ಆಕಾಶ್‌ ‘ರೊಮ್ಯಾಂಟಿಕ್‌’ ನಡೆ

7

ಆಕಾಶ್‌ ‘ರೊಮ್ಯಾಂಟಿಕ್‌’ ನಡೆ

Published:
Updated:
Prajavani

ತೆಲುಗು ಚಿತ್ರರಂಗದ ಹೆಸರಾಂತ ನಿರ್ದೇಶಕ ಪುರಿ ಜಗನ್ನಾಥ್‌ ಮಗ ಆಕಾಶ್‌ ಬಾಲನಟನಾಗಿ ತೆಲುಗು ಭಾಷಿಗರ ಮನೆ ಮಾತು. ಈಗ ಅವರಿಗೆ ರೊಮ್ಯಾಂಟಿಕ್‌ ದಿನಗಳು ಎದುರಾಗಿವೆ.

ತಂದೆಯದೇ ನಿರ್ದೇಶನದ ‘ಮೆಹಬೂಬ’ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಟನಾಗಿ ಕಾಣಿಸಿಕೊಂಡರೂ  ಅಂದುಕೊಂಡಷ್ಟು ಯಶಸ್ಸು ಕಾಣಲಿಲ್ಲ. ಆದರೆ ಆಕಾಶ್‌ ನಟನೆಯ ತಾಕತ್ತನ್ನು ಚಿತ್ರರಂಗ ಅರ್ಥ ಮಾಡಿಕೊಳ್ಳಲು ‘ಮೆಹಬೂಬ’ ವೇದಿಕೆಯಾಯಿತು. 

ಇದೀಗ ಎರಡನೇ ಚಿತ್ರಕ್ಕೆ ಆಕಾಶ್‌ ಸಹಿ ಹಾಕಿದ್ದಾರೆ. ಚಿತ್ರದ ಶೀರ್ಷಿಕೆ ‘ರೊಮ್ಯಾಂಟಿಕ್‌’. ಭೂಗತ ಜಗತ್ತಿನಲ್ಲಿ ನಡೆಯುವ ಪ್ರೀತಿ ಪ್ರೇಮ ಪ್ರಣಯದ ಕತೆ ‘ರೊಮ್ಯಾಂಟಿಕ್‌’ನಲ್ಲಿದೆಯಂತೆ.

ಪುರಿ ಜಗನ್ನಾಥ್‌ ಮತ್ತು ಚಾರ್ಮಿ ಜಂಟಿಯಾಗಿ ಬಂಡವಾಳ ಹೂಡಲಿದ್ದಾರೆ. ಆಕಾಶ್‌ನನ್ನು ರೊಮ್ಯಾಂಟಿಕ್‌ ಹೀರೊ ಆಗಿ ಈ ಬಾರಿ ಕಾಣಲಿದ್ದೀರಿ ಎಂದು ಚಾರ್ಮಿ ಹೇಳಿದ್ದಾರೆ. ಪುರಿ ಅವರ ಸಹಾಯಕ ಅನಿಲ್‌ ಪಾಡುರಿ ನಿರ್ದೇಶನದಲ್ಲಿ ಚಿತ್ರ ಸೆಟ್ಟೇರಿದೆ.

2012ರಲ್ಲಿ ತೆಲುಗು ಮತ್ತು ತಮಿಳಿನಲ್ಲಿ ‘ಧೋನಿ’ ಚಿತ್ರದಲ್ಲಿ ನಟಿಸಿದ ಬಳಿಕ ಅವಕಾಶಗಳಿಲ್ಲದೆ ಕುಳಿತಿದ್ದ ಆಕಾಶ್‌ ಮತ್ತೆ ಬಣ್ಣ ಹಚ್ಚಿದ್ದು 2015ರಲ್ಲಿ ‘ಆಂಧ್ರ ಪೋರಿ’ಗಾಗಿ. ಮತ್ತೆ ಮೂರು ವರ್ಷದ ಬ್ರೇಕ್‌. ಕಳೆದ ವರ್ಷ ‘ಮೆಹಬೂಬ’ ತೆರೆಕಂಡಿತು. ಈ ವರ್ಷ ‘ರೊಮ್ಯಾಂಟಿಕ್‌’ನ ಜೊತೆಗೇ ತೆಲುಗಿನ ‘ದಿ ಲೋಟಸ್‌ ಪಾಂಡ್‌’ ಚಿತ್ರೀಕರಣದಲ್ಲಿ ಆಕಾಶ್‌ ತೊಡಗಿಸಿಕೊಳ್ಳಲಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !