ಸೋಮವಾರ, ಆಗಸ್ಟ್ 15, 2022
22 °C

ಅಖಿಲ್ ಅಕ್ಕಿನೇನಿಗೆ ಜೋಡಿಯಾಗಲಿದ್ದಾರಾ ರಶ್ಮಿಕಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡತಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ತೆಲುಗಿನಲ್ಲಿ ಬಹುಬೇಡಿಕೆಯ ನಟಿ. ಸ್ಟಾರ್‌ ನಟರ ಜೊತೆ ನಟಿಸುವ ಮೂಲಕ ಟಾಲಿವುಡ್‌ನಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ಈಗ ಅನೇಕ ಸಿನಿ ನಿರ್ಮಾಪಕರು ಆಕೆಯ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದಾರೆ. ತಮ್ಮ ನಟನಾ ಕೌಶಲ ಹಾಗೂ ಸುಂದರ ನೋಟದಿಂದ ಸಿನಿಪ್ರಿಯ ಮನಗೆದಿದ್ದಾರೆ ರಶ್ಮಿಕಾ.

ಸದ್ಯದ ಸುದ್ದಿಯ ಪ್ರಕಾರ ಅಖಿಲ್‌ ಅಕ್ಕಿನೇನಿ ನಟನೆಯ ಮುಂದಿನ ಚಿತ್ರಕ್ಕೆ ರಶ್ಮಿಕಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡುವ ಯೋಚನೆಯಲ್ಲಿದೆಯಂತೆ ಚಿತ್ರತಂಡ. ಅಖಿಲ್ ತಮ್ಮ ಮುಂದಿನ ಚಿತ್ರದ ನಿರ್ದೇಶಕ ಸುರೇಂದ್ರ ರೆಡ್ಡಿ ಎಂದು ಘೋಷಣೆ ಮಾಡಿದ್ದಾರೆ. ಅವರ ಅಭಿಮಾನಿಗಳು ಹಾಗೂ ಹಿಂಬಾಲಕರು ಚಿತ್ರದ ಕುರಿತು ಇನ್ನಷ್ಟು ಮಾಹಿತಿ ಪಡೆದುಕೊಳ್ಳಲು ಉತ್ಸುಕರಾಗಿದ್ದಾರೆ. ಸಸ್ಪೆನ್ಸ್–ಥ್ರಿಲ್ಲರ್‌ ಸಿನಿಮಾವಾಗಿರುವ ಈ ಸಿನಿಮಾಗೆ ತಾತ್ಕಾಲಿಕವಾಗಿ ‘ಅಖಿಲ್‌ 5’ ಎಂದು ಹೆಸರಿಸಲಾಗಿದೆ.

ಇನ್ನು ರಶ್ಮಿಕಾ ಅಲ್ಲು ಅರ್ಜುನ್‌ ನಟನೆಯ ‘ಪುಷ್ಪಾ’ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ಸುಕುಮಾರ್ ನಿರ್ದೇಶನವಿದ್ದು ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನವಿದೆ. ಕಾಡಿನ ಹಿನ್ನೆಲೆಯಲ್ಲಿ ನಡೆಯುವ ಥ್ರಿಲ್ಲರ್ ಕತೆ ಇದಾಗಿದೆ. ಗಂಧದಮರದ ಕಳ್ಳಸಾಗಣಿಕೆಯ ಕತೆಯನ್ನು ಹೊಂದಿದೆ ಪುಷ್ಪಾ ಚಿತ್ರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು