ಮಂಗಳವಾರ, ನವೆಂಬರ್ 19, 2019
26 °C

ತಂದೆ ನೆನೆದು ಭಾವುಕರಾದ ನಾಗಾರ್ಜುನ

Published:
Updated:
Prajavani

‘ಅಕ್ಕಿನೇನಿ ನಾಗೇಶ್ವರರಾವ್‌ ಇದ್ದಿದ್ದರೆ ಅವರ 95ನೇ ಹುಟ್ಟುಹಬ್ಬ ಆಚರಿಸುವ ಸಂಭ್ರಮ ಇರುತ್ತಿತ್ತು’ ಎಂದು ನಟ ಅಕ್ಕಿನೇನಿ ನಾಗಾರ್ಜುನ ನೆನೆಸಿಕೊಂಡಿದ್ದಾರೆ. ನಾಗೇಶ್ವರರಾವ್‌ ಅವರ ಹುಟ್ಟುಹಬ್ಬದಂದು ಸರಣಿ ಟ್ವೀಟ್ ಮಾಡಿರುವ ನಾಗಾರ್ಜುನ ತಂದೆಯನ್ನು ನೆನೆದು ಭಾವುಕರಾಗಿರುವುದಾಗಿ ಹೇಳಿದ್ದಾರೆ.

ಅನಾರೋಗ್ಯದ ನಡುವೆಯೂ ‘ಮನಂ’ ಸಿನಿಮಾದ ಶೂಟಿಂಗ್‌ನಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ನಾಗೇಶ್ವರರಾವ್ ಅವರ ಬದ್ಧತೆಯನ್ನು ನೆನೆಸಿಕೊಂಡಿದ್ದಾರೆ. ‘ಅವರ ಸಾಧನೆ, ಜೀವನ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾದದ್ದು’ ಎಂದು ನಾಗಾರ್ಜುನ ಸ್ಮರಿಸಿದ್ದಾರೆ.

‘ನಾಗೇಶ್ವರರಾವ್ ಅವರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕರಾಗಿ ದುಡಿದಿದ್ದಾರೆ. ಆದರೆ ಕೊನೆಯ ದಿನಗಳಲ್ಲಿ ಕ್ಯಾನ್ಸರ್‌ನಿಂದಾಗಿ ನೋವು ಅನುಭವಿಸಿದರು. ಅವರನ್ನು ಸ್ಮರಿಸದೇ ಇರುವ ದಿನವೇ ಇಲ್ಲ’ ಎಂದು ನಾಗಾರ್ಜುನ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 

ಇದನ್ನೂ ಓದಿ...ಸಿಂಧುಗೆ ನಾಗಾರ್ಜುನ ದುಬಾರಿ ಕಾರು

‘ವಿಕ್ರಂ ಕುಮಾರ್‌ ನಿರ್ದೇಶನದ ‘ಮನಂ’ ಸಿನಿಮಾದಲ್ಲಿ ಅವರು ತಮ್ಮ ಕುಟುಂಬದ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ್ದರು. ಆ ಕನಸು ನನಸಾದ ಖುಷಿಯಲ್ಲಿ ಅವರಿದ್ದರು’ ಎಂದು ನಾಗಾರ್ಜುನ ನೆನೆಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)