ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷಯ್ –ಕರೀನಾ ‘ಗುಡ್ ನ್ಯೂಸ್’

Last Updated 27 ಮಾರ್ಚ್ 2019, 11:46 IST
ಅಕ್ಷರ ಗಾತ್ರ

ಅಕ್ಷಯ್ ಕುಮಾರ್ ಮತ್ತು ಕರೀನಾ ಕಪೂರ್ ಖಾನ್ ಅಭಿಮಾನಿಗಳಿಗೆ ಇಲ್ಲೊಂದು ‘ಗುಡ್ ನ್ಯೂಸ್’ ಇದೆ. ಅರೆ ಕರೀನಾಗೆ ಮಗುವಾಯಿತಲ್ಲಾ, ಅಕ್ಷಯ್‌ಗಂತೂ ಮಕ್ಕಳಾಗಿ ಬಹಳ ವರ್ಷಗಳೇ ಆಗಿವೆ. ಈಗ ಎಂಥ ‘ಗುಡ್ ನ್ಯೂಸ್’ ಅಂತೀರಾ. ಇದು ಆ ‘ಗುಡ್ ನ್ಯೂಸ್’ ಅಲ್ಲ... ಇದು ಸಿನಿಮಾ ‘ಗುಡ್ ನ್ಯೂಸ್’.

ಹೌದು. ಅಕ್ಷಯ್ ಮತ್ತು ಕರೀನಾ ‘ಗುಡ್ ನ್ಯೂಸ್’ ಅನ್ನುವ ಸಿನಿಮಾದಲ್ಲಿ ಜೋಡಿಯಾಗಿ ನಟಿಸಲಿದ್ದಾರೆ. ಅದೂ ಬರೋಬ್ಬರಿ 12 ವರ್ಷಗಳ ಬಳಿಕ!

ಪಕ್ಕಾ ಕಾಮಿಡಿ ಸಿನಿಮಾ ಆಗಿರುವ ‘ಗುಡ್‌ನ್ಯೂಸ್‌’ನಲ್ಲಿ 90ರ ದಶಕದ ಪಾಪ್ ಹಿಟ್ ಸಾಂಗ್ ‘ಸೌದಾ ಖರಾ ಖರಾ’ ಹಾಡನ್ನು ಬಳಸಿಕೊಂಡಿರುವುದು ವಿಶೇಷ. ಸುಖ್‌ಬೀರ್ ಕಂಠದಲ್ಲಿ ಪಕ್ಕಾ ಪಂಜಾಬಿ ಸ್ಟೈಲಿನಲ್ಲಿ ಮೂಡಿಬಂದಿದ್ದ ಈ ಹಾಡಿಗೆ ಅಂದು ಬಿಪಾಶ ಬಸು ಮತ್ತು ಡಿನೊ ಮೊರಿಯಾ ಹೆಜ್ಜೆ ಹಾಕಿದ್ದರು. ಈಗ ಇದೇ ಹಾಡನ್ನು ‘ಗುಡ್ ನ್ಯೂಸ್’ ಸಿನಿಮಾದಲ್ಲಿ ತುಸು ಮಾರ್ಪಡಿಸಿಕೊಂಡು ಬಳಸಿಲಾಗುತ್ತಿದೆಯಂತೆ. ಈ ಗೀತೆಯಲ್ಲಿ ಕರೀನಾ, ಅಕ್ಷಯ್ ಜತೆಗೆ ದಲ್ಜಿತ್ ಮತ್ತು ಕಿಯಾರ ಅಡ್ವಾಣಿ ಇರುವುದು ಮತ್ತೊಂದು ವಿಶೇಷ.

ಕಿಯಾರ ಮತ್ತು ಕರೀನಾ ಇಬ್ಬರೂ ಈ ಹಾಡಿನಲ್ಲಿ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದು, ಈ ವರ್ಷದ ಹಿಟ್ ಹಾಡುಗಳ ಪಟ್ಟಿಗೆ ಈ ಹಾಡು ಸೇರುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ಈ ಸಿನಿಮಾದಲ್ಲಿ ಅಕ್ಷಯ್–ಕರೀನಾ ದಂಪತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮದುವೆಯಾಗಿ ಏಳು ವರ್ಷಗಳ ನಂತರವೂ ಮಕ್ಕಳಾಗದೇ ಪ‍ರಿತಪಿಸುವ ದಂಪತಿಯ ಕಥೆ ಇದಾಗಿದೆ. ಐವಿಎಫ್ ತಂತ್ರಜ್ಞಾನದ ಮೂಲಕ ಮಗುವನ್ನು ಪಡೆಯುವ ತಾಯಿ ಪಾತ್ರದಲ್ಲಿ ಕರೀನಾ ಅಭಿನಯಿಸುತ್ತಿದ್ದು, ತಾಯಿಯಾದ ಸಂಭ್ರಮವನ್ನು ‘ಸೌದಾ ಖರಾ ಖರಾ’ ಹಾಡಿನ ಮೂಲಕ ಹಂಚಿಕೊಳ್ಳುವ ದೃಶ್ಯ ಸಿನಿಮಾದಲ್ಲಿದೆ. ‘ಗುಡ್‌ನ್ಯೂಸ್’ನಲ್ಲಿ ಕರೀನಾ–ಅಕ್ಷಯ್ 12 ವರ್ಷಗಳ ಬಳಿಕ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಇವರಿಬ್ಬರೂ ‘ರೌಡಿರಾಥೋರ್’, ’ಗಬ್ಬರ್ ಈಸ್ ಬ್ಯಾಕ್’, ‘ಬ್ರದರ್ಸ್‌’ ಮತ್ತು ‘ಕಂಬಕ್ತ್ ಇಷ್ಕ್’ನಲ್ಲಿ ಜೋಡಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT