ತಪನ್‌ದಾಸ್‌ ಪಾತ್ರದಲ್ಲಿ ಅಕ್ಷಯ್‌ ನಟನೆ

7

ತಪನ್‌ದಾಸ್‌ ಪಾತ್ರದಲ್ಲಿ ಅಕ್ಷಯ್‌ ನಟನೆ

Published:
Updated:

ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ನಟ ಅಕ್ಷಯ್‌ ಕುಮಾರ್‌ ಬಂಗಾಳಿ ವ್ಯಕ್ತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

‘ಗೋಲ್ಡ್‌’ ಎಂಬ ಚಿತ್ರದಲ್ಲಿ ಅವರು ನಟಿಸುತ್ತಿದ್ದು, ಚಿತ್ರದ ಪ್ರಚಾರ ಕಾರ್ಯಕ್ರಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಾವು ನಿರ್ವಹಿಸಿದ ಪಾತ್ರಗಳಲ್ಲೇ ಇದು ಅತ್ಯಂತ ವಿಶಿಷ್ಟವಾಗಿದೆ ಎಂದು ಅವರು ಹೇಳಿಕೊಂಡಿರುವುದು ಕುತೂಹಲ ಮೂಡಿಸಿದೆ. 

‘ಚಿತ್ರದಲ್ಲಿ ನಾನು ತಪನ್‌ದಾಸ್‌ ಎಂಬ ಬಂಗಾಳಿ ಕ್ರೀಡಾಪಟುವಿನ ಪಾತ್ರ ಮಾಡಿದ್ದೇನೆ. ಬ್ರಿಟಿಷರ ನೆಲದಲ್ಲಿ ಭಾರತದ ತಿರಂಗ ಧ್ವಜ ಹಾರಾಡುವುದನ್ನು ಕಾಣಬೇಕೆಂದು ಪಣ ತೊಟ್ಟ ಕ್ರೀಡಾಳುವಿನ ದೇಶಾಭಿಮಾನದ ಕತೆ ಚಿತ್ರದ್ದು.  ಅವರ ಸ್ವಭಾವವನ್ನು ಅರ್ಥ ಮಾಡಿಕೊಂಡು ಪಾತ್ರ ನಿರ್ವಹಿಸಿದ್ದೇನೆ. ತಪನ್‌ದಾಸ್‌ ಬಗ್ಗೆ ಕೇಳಿದಾಗ ಈ ಪಾತ್ರವನ್ನು ನಾನೇ ಮಾಡಬೇಕು ಎಂದನ್ನಿಸಿತು’
ಎಂದು ಹೇಳಿದ್ದಾರೆ. 

ಈ ಹಿಂದೆ ಬಂಗಾಳಿ ವ್ಯಕ್ತಿಯ ಪಾತ್ರ ಮಾಡಿಲ್ಲದಿದ್ದರೂ ಸಿನಿಮಾದ ನಟನೆಗೆ ಭಾಷೆ ಅಡ್ಡಿಯಾಗಲಿಲ್ಲವಂತೆ.

‘ಇದಕ್ಕೆ ನನ್ನ ಹಾಗೂ ಬಂಗಾಳಿ ಭಾಷೆ ಸಂಬಂಧ ಕಾರಣ. ಸಿನಿಮಾದಲ್ಲಿ ಬಂಗಾಳಿ ಭಾಷೆಯ ಉಚ್ಛಾರಣೆ, ಮಾತನಾಡುವುದು ನನಗೆ ಕಷ್ಟವಾಗಲಿಲ್ಲ. ನಾನು 1985ರಲ್ಲಿ ಕೋಲ್ಕತ್ತದಲ್ಲಿ 2 ವರ್ಷ ಹಾಗೂ ಬಾಂಗ್ಲಾದೇಶದ ಢಾಕಾದಲ್ಲಿ 6 ತಿಂಗಳು ಕೆಲಸ ಮಾಡಿದ್ದೆ. ನಿರ್ದೇಶಕ ಪ್ರಮೋದ್‌ ಚಕ್ರವರ್ತಿ ನನಗೆ ಈ ಚಿತ್ರದಲ್ಲಿ ಉತ್ತಮ ಅವಕಾಶ ನೀಡಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !