ಮುಂಬೈ: ಆನ್ಲೈನ್ ಗೇಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ 13 ವರ್ಷದ ಮಗಳಿಗೆ ‘ಬೆತ್ತಲೆ ಫೋಟೊ’ ಕಳುಹಿಸಲು ಹೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯೊಬ್ಬನನ್ನು ಮಹಾರಾಷ್ಟ್ರ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್ನಲ್ಲಿ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ 'ಸೈಬರ್ ಜಾಗೃತಿ ಮಾಸ 2025'ರ ಉದ್ಘಾಟನಾ ಸಮಾರಂಭದಲ್ಲಿ ಅಕ್ಷಯ್ ಕುಮಾರ್ ಅವರು ಮಗಳ ಮೇಲೆ ನಡೆದ ಸೈಬರ್ ಕಿರುಕುಳದ ಬಗ್ಗೆ ಮಾತನಾಡಿದ್ದರು.

‘ನನ್ನ ಮಗಳಿಗೆ ವಿಡಿಯೊ ಗೇಮ್ ಆಟವಾಡುವ ಅಭ್ಯಾಸವಿತ್ತು. ಆನ್ಲೈನ್ನಲ್ಲಿ ವಿಡಿಯೊ ಗೇಮ್ ಅನ್ನು ಅಪರಿಚಿತರ ಜೊತೆಯೂ ಆಡಬಹುದಾಗಿದೆ. ಹೀಗೆ ಅಪರಿಚಿತರ ಜೊತೆ ಗೇಮ್ ಆಡುವಾಗ, ವ್ಯಕ್ತಿಯೊಬ್ಬ ನನ್ನ ಮಗಳ ಬಳಿ 'ನೀವು ಎಲ್ಲಿಯವರು?' ಎಂದು ಕೇಳಿದ. ಅದಕ್ಕೆ ಅವಳು ‘ಮುಂಬೈ’ ಎಂದು ಉತ್ತರಿಸಿದ್ದಳು. ನಂತರ ಅವನು ‘ನೀವು ಗಂಡೋ ಅಥವಾ ಹೆಣ್ಣೋ’ ಎಂದು ಕೇಳಿದ. ಅದಕ್ಕೆ ‘ಹೆಣ್ಣು’ ಎಂದು ಉತ್ತರಿಸಿದಳು. ಸಂಭಾಷಣೆ ಮುಂದುವರಿದಂತೆ,'ನಿನ್ನ ಬೆತ್ತಲೆ ಚಿತ್ರವನ್ನು ಕಳುಹಿಸುತ್ತಿಯಾ?' ಎಂದು ಆತ ಕೇಳಿದ. ಇದರಿಂದ ಭಯಗೊಂಡ ನನ್ನ ಮಗಳು, ವಿಡಿಯೊ ಗೇಮ್ ಆಫ್ ಮಾಡಿ, ತನ್ನ ತಾಯಿಗೆ ಈ ವಿಷಯ ಹೇಳಿದಳು’ ಎಂದು ಅಕ್ಷಯ್ ಹೇಳಿದ್ದರು.

‘ತಾಯಿಯ ಜೊತೆ ಈ ವಿಷಯ ಹಂಚಿಕೊಂಡಿದ್ದು ನಿಜಕ್ಕೂ ಒಳ್ಳೆದಾಯಿತು. ಎಲ್ಲಾ ಪ್ರಕರಣಗಳೂ ಹೀಗೆಯೇ ಪ್ರಾರಂಭವಾಗುತ್ತದೆ. ಇದು ಕೂಡ ಸೈಬರ್ ಅಪರಾಧದ ಒಂದು ಭಾಗವಾಗಿದೆ. ಇಂತಹ ಪ್ರಕರಣಗಳಲ್ಲಿ ಮಕ್ಕಳು ಬಲಿಪಶುಗಳಾಗುತ್ತಾರೆ. ನಂತರ ಹಣಕ್ಕಾಗಿ ಸುಲಿಗೆ ಪ್ರಾರಂಭವಾಗುತ್ತದೆ. ಇದೇ ಕಾರಣ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ’ ಎಂದಿದ್ದರು.

‘ಸೈಬರ್ ಕಿರುಕುಳ’ದ ಬಗ್ಗೆ ಅಕ್ಷಯ್ ಅವರು ವಿವರಿಸಿದ ಬೆನ್ನಲ್ಲೇ, ಸೈಬರ್ ಪೊಲೀಸರು ತನಿಖೆಯನ್ನು ಆರಂಭಿಸಿದ್ದರು.

‘ತಾಂತ್ರಿಕ ವಿಶ್ಲೇಷಣೆ ಮತ್ತು ಡಿಜಿಟಲ್ ಟ್ರ್ಯಾಕಿಂಗ್ ಮೂಲಕ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಈತ ಇದೇ ರೀತಿಯ ದುರ್ವರ್ತನೆಯನ್ನು ಇತರ ಮಕ್ಕಳೊಂದಿಗೂ ಮಾಡಿದ್ದಾನೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.