ಮಂಗಳವಾರ, ಜೂನ್ 15, 2021
27 °C

ಅಸ್ಸಾಂ ಪ್ರವಾಹ ನಿಧಿಗೆ ₹ 1 ಕೋಟಿ ದೇಣಿಗೆ ಕೊಟ್ಟ ಅಕ್ಷಯ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅಸ್ಸಾಂ ಪ್ರವಾಹ ನಿಧಿಗೆ ₹ 1 ಕೋಟಿ ದೇಣಿಗೆ ನೀಡಿದ್ದಾರೆ.

ಸಂತ್ರಸ್ತರಿಗೆ ಪರಿಹಾರ ಕಾರ್ಯ ಕೈಗೊಳ್ಳಲು ಕೈಜೋಡಿಸಿರುವ ಅಕ್ಕಿಯ ಔದಾರ್ಯಕ್ಕೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

‘ಸಂಕಷ್ಟದ ಸಮಯದಲ್ಲಿ ನೀವು ಯಾವಾಗಲೂ ಸಹಾನುಭೂತಿ ಮತ್ತು ಬೆಂಬಲ ವ್ಯಕ್ತಪಡಿಸಿದ್ದೀರಿ. ಅಸ್ಸಾಂ ಜನತೆಯ ನಿಜವಾದ ಸ್ನೇಹಿತ ನೀವು. ಜಾಗತಿಕಮಟ್ಟದಲ್ಲಿ ನಿಮ್ಮ ಕೀರ್ತಿ ವಿಜೃಂಭಿಸುವಂತೆ ದೇವರು ನಿಮಗೆ ಆಶೀರ್ವಾದ ದಯಪಾಲಿಸಲಿ’ ಎಂದು ಸೋನಾವಾಲಾ‌ ಟ್ವೀಟ್‌ ಮಾಡಿದ್ದಾರೆ.

ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಹೋರಾಡುತ್ತಿರುವ ಕೇಂದ್ರ ಸರ್ಕಾರದ ಜತೆಗೆ ಕೈಜೋಡಿಸಿದ್ದ ಅಕ್ಷಯ್‌ ಕುಮಾರ್‌, ‘ಪಿಎಂ–ಕೇರ್ಸ್‌’ ನಿಧಿಗೆ ₹25 ಕೋಟಿ ನೀಡಿದ್ದರು.

ಅಕ್ಕಿ ಕಳೆದ ವರ್ಷವೂ ಪ್ರವಾಹ ಪರಿಹಾರ ನಿಧಿಗೆ ₹2 ಕೋಟಿ ದೇಣಿಗೆ ನೀಡಿದ್ದರು. ಇತ್ತೀಚೆಗಷ್ಟೇ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್‌ ಜೋನಾಸ್‌ ದಂಪತಿ ಹಾಗೂ ವಿರಾಟ್ ಮತ್ತು ಅನುಷ್ಕಾ ದಂಪತಿ ಅಸ್ಸಾಂ ಪ್ರವಾಹ ನಿಧಿಗೆ ದೇಣಿಗೆ ನೀಡಿ, ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಸಂಘಟನೆಗಳೊಂದಿಗೆ ಕೈಜೋಡಿಸಿದ್ದರು. ಅಸ್ಸಾಂ ಪ್ರವಾಹ ಸಂತ್ರಸ್ತರ ನೆರವಿಗೆ ಕೈಜೋಡಿಸುವಂತೆ ಈ ತಾರಾ ದಂಪತಿ ಮನವಿ ಮಾಡಿದ್ದರು.

ತಮ್ಮ ಮುಂಬರುವ ‘ಬೆಲ್ ಬಾಟಮ್’ ಚಿತ್ರದ ಚಿತ್ರೀಕರಣವನ್ನು ಮುಂದಿನ ತಿಂಗಳು ಯುಕೆಯಲ್ಲಿ ನಡೆಸುವುದಾಗಿ ಅಕ್ಷಯ್‌ ಕುಮಾರ್‌ ಘೋಷಿಸಿದ್ದಾರೆ. ಈ ಚಿತ್ರ ರಿಷಬ್‌ ಶೆಟ್ಟಿ ಮತ್ತು ಹರಿಪ್ರಿಯಾ ನಟನೆಯ ‘ಬೆಲ್‌ ಬಾಟಮ್‌’ ಕನ್ನಡ ಚಿತ್ರದ ರಿಮೇಕ್‌ ಆಗಿದೆ. ಇದು ಸ್ಯಾಂಡಲ್‌ವುಡ್‌ನಲ್ಲಿ ಯಶಸ್ಸು ಕಂಡ ಸಿನಿಮಾ ಎನಿಸಿದೆ. ಕೋವಿಡ್‌ –19 ಲಾಕ್‌ಡೌನ್‌ ನಂತರ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಿದ ಮೊದಲ ಬಾಲಿವುಡ್‌ ತಾರೆ ಎನ್ನುವ ಹೆಗ್ಗಳಿಕೆಯೂ ಅಕ್ಷಯ್‌ ಕುಮಾರ್‌ ಪಾಲಾಗುತ್ತಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು