ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್‌ಗೆ ಒಟಿಟಿಯಲ್ಲೇ ‘ಲಕ್ಷ್ಮಿ ಬಾಂಬ್‌’ ಚಿತ್ರ ಬಿಡುಗಡೆ

Last Updated 10 ಸೆಪ್ಟೆಂಬರ್ 2020, 7:38 IST
ಅಕ್ಷರ ಗಾತ್ರ

ಕಾಲಿವುಡ್‌ನಲ್ಲಿ ಭಯಾನಕ ಅವತಾರ ತೋರಿದ್ದ ‘ಕಾಂಚನಾ’ ಕನ್ನಡದಲ್ಲೂ ಅಬ್ಬರಿಸಿದ್ದು ಉಂಟು. ಈಗ ಬಾಲಿವುಡ್‌ನಲ್ಲಿ ‘ಲಕ್ಷ್ಮಿ ಬಾಂಬ್‌’ ರೂಪ ತಾಳಿ ತನ್ನ ಚಮತ್ಕಾರ ತೋರಲು ಸಜ್ಜಾಗಿದ್ದಾಳೆ. ಅಕ್ಷಯ್‌ ಕುಮಾರ್‌ ನಟನೆಯ ‘ಲಕ್ಷ್ಮಿ ಬಾಂಬ್’ ಚಿತ್ರ ನಿರ್ದೇಶಿಸಿರುವುದು ರಾಘವ ಲಾರೆನ್ಸ್‌. ತಮಿಳಿನಲ್ಲೂ ಅವರೇ ಈ ಹಾರರ್‌ ಸರಣಿಯ ಸಿನಿಮಾಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಈ ಚಿತ್ರದಲ್ಲಿ ಅಕ್ಷಯ್‌ಗೆ ಕಿಯಾರಾ ಅಡ್ವಾಣಿ ನಾಯಕಿ. ಈ ಸಿನಿಮಾವನ್ನು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ₹ 125 ಕೋಟಿಗೆ ಖರೀದಿಸಿದೆಯಂತೆ. ಒಟಿಟಿ ವೇದಿಕೆಗಳ ಚರಿತ್ರೆಯಲ್ಲಿಯೇ ಇಷ್ಟು ದೊಡ್ಡ ಮೊತ್ತಕ್ಕೆ ಖರೀದಿಯಾದ ಮೊದಲ ಬಾಲಿವುಡ್‌ ಚಿತ್ರ ಇದಾಗಿದೆ.

ಕೋವಿಡ್‌–19 ಪರಿಣಾಮ ಕಳೆದ ಐದು ತಿಂಗಳಿಂದಲೂ ಚಿತ್ರಮಂದಿರಗಳ ಪ್ರದರ್ಶನ ಸ್ಥಗಿತಗೊಂಡಿದೆ. ಈ ನಡುವೆಯೇ ‘ಲಕ್ಷ್ಮಿ ಬಾಂಬ್‌’ ಒಟಿಟಿಯಲ್ಲಿ ಬಿಡುಗಡೆಯಾಗುವುದಿಲ್ಲ; ಚಿತ್ರಮಂದಿರದಲ್ಲಿಯೇ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡಿತ್ತು. ಇದು ಅಕ್ಷಯ್‌ ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿತ್ತು.

ಆದರೆ, ಈ ಸುದ್ದಿಯನ್ನು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸ್ಪಷ್ಟವಾಗಿ ತಳ್ಳಿ ಹಾಕಿದೆ. ನವೆಂಬರ್‌ನಲ್ಲಿ ಒಟಿಟಿಯಲ್ಲಿಯೇ ಈ ಚಿತ್ರ ಬಿಡುಗಡೆಯಾಗಲಿದೆಯಂತೆ. ಕೇಪ್ ಆಫ್ ಗುಡ್ ಫಿಲ್ಮ್ಸ್, ಫಾಕ್ಸ್ ಸ್ಟಾರ್ ಸ್ಟುಡಿಯೊಸ್, ಶಬಿನಾ ಎಂಟರ್‌ಟೈನ್‌ಮೆಂಟ್‌, ತುಷಾರ್ ಎಂಟರ್‌ಟೈನ್‌ಮೆಂಟ್‌ ಹೌಸ್‌ನಿಂದ ಇದಕ್ಕೆ ಬಂಡವಾಳ ಹೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT