ಬೆಲ್‌ಬಾಟಂ ಶೂಟಿಂಗ್ ಆರಂಭ: ರೆಟ್ರೋ ಸ್ಪೈ ಅವತಾರದಲ್ಲಿ ಅಕ್ಷಯ್ ಕುಮಾರ್

ನಟ ಅಕ್ಷಯ್ ಕುಮಾರ್ ನಟನೆಯ ಮುಂದಿನ ಚಿತ್ರ ‘ಬೆಲ್ ಬಾಟಂ’ನ ಶೂಟಿಂಗ್ ಸ್ಕಾಟ್‌ಲೆಂಡ್‌ನಲ್ಲಿ ಆರಂಭವಾಗಿದೆ. ಶೂಟಿಂಗ್ ಸ್ಥಳದಿಂದ ಚಿತ್ರತಂಡ ಬಿಡುಗಡೆ ಮಾಡಿದ ಅಕ್ಷಯ್ ಫೋಟೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಅಕ್ಷಯ್ ಈ ಸಿನಿಮಾದಲ್ಲಿ ರೆಟ್ರೊ ಗೂಢಾಚಾರಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಕುತ್ತಿಗೆವರೆಗೂ ಪೂರ್ತಿಯಾಗಿ ಮುಚ್ಚಿರುವ ಪುಲ್ಲೋವರ್, ಅದರ ಮೇಲೆ ಪ್ರಿಂಟ್ ಇರುವ ಸ್ವೆಟರ್, ಸೂಟ್ ಹಾಗೂ ಜಾಕೆಟ್‌ಗಳನ್ನು ಧರಿಸಿರುವ ಭಿನ್ನ ಫೋಟೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅವರ ಗಂಭೀರ ನೋಟ ಹಾಗೂ ಟಿಂಟ್ ಇರುವ ಸನ್‌ಗ್ಲಾಸ್ ಅವರು ಗೂಢಾಚಾರಿ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬುದನ್ನು ಹೇಳುವಂತಿದೆ. ಈ ಚಿತ್ರಕ್ಕೆ ರಂಜಿತ್ ತಿವಾರಿ ನಿರ್ದೇಶನವಿದೆ.
ಬೆಲ್‌ಬಾಟಂ ಸಿನಿಮಾವು 1980ರ ಸಮಯದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಹುಮಾ ಕುರೇಶಿ, ವಾಣಿ ಕಪೂರ್ ಹಾಗೂ ಲಾರಾ ದತ್ತ ನಟಿಸುತ್ತಿದ್ದಾರೆ. ಸ್ಕಾಟ್‌ಲೆಂಡ್‌ನ ಹೊರಬೀದಿಗಳಲ್ಲಿ ಚಿತ್ರೀಕರಣ ನಡೆಸುತ್ತಿರುವ ಚಿತ್ರತಂಡ ಕೋವಿಡ್– 19 ಗೆ ಸಂಬಂಧಿಸಿ ಸುರಕ್ಷಿತ ಕ್ರಮಗಳನ್ನು ಅನುಸರಿಸಿರುವುದನ್ನು ಗಮನಿಸಬಹುದು.
ಬೆಲ್‌ಬಾಟಂ ಚಿತ್ರವು 2021ರ ಏಪ್ರಿಲ್ 2 ರಂದು ತೆರೆ ಕಾಣುವ ನಿರೀಕ್ಷೆ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.