ಬೆಂಗಳೂರು: ವಿವಿಧ ಪಾತ್ರಗಳಲ್ಲಿ ಪ್ರೇಕ್ಷಕರ ಮನಸೊರೆಗೊಂಡಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇದೀಗ ‘ಏಲಿಯನ್’ ಆಗಿ ಮಿಂಚಲು ಅಣಿಯಾಗಿದ್ದಾರೆ.

ವಿಪುಲ್ ಅಮೃತ್ಲಾಲ್ ಶಾ ನಿರ್ಮಾಣದ ಹಾಗೂ ಕಾನಿಷ್ಕ ವರ್ಮಾ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಸುಮುಕ್’ ಎಂಬ ಎಲಿಯನ್ ಕಥೆಯಾಧರಿತ ಸಿನಿಮಾದಲ್ಲಿ ನಾಯಕ ನಟನಾಗಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. 2027 ರಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.

ಭಾರತದಲ್ಲಿ ಹಾಲಿವುಡ್ ದರ್ಜೆಯ ಏಲಿಯನ್ ಥ್ರಿಲ್ಲರ್ ಸಿನಿಮಾ ನಿರ್ಮಿಸುವುದು ನಮ್ಮ ಗುರಿ ಎಂದು ಕಾನಿಷ್ಕ ವರ್ಮಾ ಹೇಳಿದ್ದಾರೆ.

‘ಸುಮುಕ್’ ಏಲಿಯನ್ ಥ್ರಿಲ್ಲರ್ ಸಿನಿಮಾಗೆ ಸಹಿ ಹಾಕಿದ್ದೇನೆ, ಶೀಘ್ರವೇ ಶೂಟಿಂಗ್ ಆರಂಭವಾಗಲಿದೆ. ನನಗೆ ಇದು ಸಂಪೂರ್ಣವಾಗಿ ಹೊಸ ಪ್ರಕಾರವಾಗಿದೆ. ಅದರ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ ಎಂದು ಅಕ್ಷಯ್ ಕುಮಾರ್ ಹೇಳಿಕೊಂಡಿದ್ದಾರೆ.

ಈ ಚಿತ್ರಕ್ಕಾಗಿ ಹಾಲಿವುಡ್ನ ಖ್ಯಾತ ‘ಪ್ರೆಡೇಟರ್’ ಪ್ರಾಂಚೈಸಿ ಸಿನಿಮಾಗಳ ತಂಡವನ್ನು ಬಳಸಿಕೊಳ್ಳಲಾಗುತ್ತಿದೆ. ತಾಂತ್ರಿಕ ತಂಡ ಬಹುತೇಕ ಹಾಲಿವುಡ್ನಿಂದ ಇರುತ್ತದೆ. ಸಾಹಸ ದೃಶ್ಯಗಳ ಸಂಯೋಜನೆಯನ್ನು ಹಾಲಿವುಡ್ ಸಾಹಸ ನಿರ್ದೇಶಕ ಲ್ಯೂಕ್ ಟಂಬರ್ ವಹಿಸಿಕೊಂಡಿದ್ದಾರೆ. ಇನ್ನುಳಿದ ಪಾತ್ರಗಳ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

ಫ್ಯಾಂಟಸಿ ಕಥೆ ಹೊಂದಿದ್ದ ಅಕ್ಷಯ್ ಕುಮಾರ್ ಅವರ ಇತ್ತೀಚಿನ ಭೂತ್ ಬಂಗ್ಲಾ ಸಿನಿಮಾಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾನಿಷ್ಕ ವರ್ಮಾ ಈ ಹಿಂದೆ ಸುನಕ್ ಸಿನಿಮಾವನ್ನು ನಿರ್ದೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.