ಅನೀಸ್ ಬಜ್ಮೀ ನಿರ್ದೇಶನದ ಹೊಸ ಸಿನಿಮಾದಲ್ಲಿ ವಿದ್ಯಾ ಬಾಲನ್ ಅವರ ಜೊತೆ ಅಕ್ಷಯ್ ಕುಮಾರ್ ಮತ್ತೊಮ್ಮೆ ತೆರೆಹಂಚಿಕೊಳ್ಳಲಿದ್ದಾರೆ. ತಮ್ಮ ಹೊಸ ಸಿನಿಮಾ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಅಕ್ಷಯ್ ಕುಮಾರ್ ಮಾಹಿತಿ ನೀಡಿದ್ದಾರೆ.

ಈ ಹಿಂದೆ ‘ಹೇ ಬೆಬಿ’, ‘ಭೂಲ್ ಭುಲಯ್ಯ’ ಹಾಗೂ ‘ಮಿಷನ್ ಮಂಗಲ್’ ಸಿನಿಮಾದಲ್ಲಿ ಅಕ್ಷಯ್–ವಿದ್ಯಾ ಬಾಲನ್ ಜೊತೆಯಾಗಿ ನಟಿಸಿದ್ದರು. ಇದು ಅವರಿಬ್ಬರ ನಾಲ್ಕನೇ ಸಿನಿಮಾ ಆಗಿರಲಿದೆ. ಸಿನಿಮಾದ ಶೀರ್ಷಿಕೆ ಮತ್ತು ಕಥಾಹಂದರದ ಬಗ್ಗೆ ಚಿತ್ರತಂಡ ಇನ್ನಷ್ಟೇ ಮಾಹಿತಿ ನೀಡಬೇಕಿದೆ. ಇದೊಂದು ಕಾಮಿಡಿ ಥ್ರಿಲ್ಲರ್ ಸಿನಿಮಾವಾಗಿರಲಿದ್ದು, ದಿಲ್ ರಾಜು ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿದೆ. ‘ಸಿಂಗ್ ಈಸ್ ಕಿಂಗ್’, ‘ವೆಲ್ಕಮ್’ ಹಾಗೂ ‘ಥ್ಯಾಂಕ್ಯೂ’ ಬಳಿಕ ಬಜ್ಮೀ ಜೊತೆಗಿನ ಹೊಸ ಪ್ರಾಜೆಕ್ಟ್ ಇದಾಗಿದೆ. ಇತ್ತೀಚೆಗೆ ತೆರೆಕಂಡ ಅಕ್ಷಯ್ ಕುಮಾರ್ ನಟನೆಯ ಪ್ರಿಯದರ್ಶನ್ ನಿರ್ದೇಶನದ ‘ಭೂತ್ ಬಂಗ್ಲಾ’ ವಿಶ್ವದಾದ್ಯಂತ ₹100 ಕೋಟಿ ಗಳಿಸಿದೆ. ಇದರ ಬೆನ್ನಲ್ಲೇ ಅಕ್ಷಯ್ ಹೊಸ ಸಿನಿಮಾ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.