ಭಾನುವಾರ, ಮಾರ್ಚ್ 26, 2023
24 °C

ಐವೊರ್‌ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಅಲನ್ನಾ ಪಾಂಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನ ಮಾದಕ ಚೆಲುವೆ ಅನನ್ಯ ಪಾಂಡೆ ಅವರ ಸಹೋದರಿ ಅಲನ್ನಾ ಪಾಂಡೆ ತನ್ನ ಗೆಳೆಯ ಐವೊರ್‌ ಮ್ಯಾಕ್‌ಕ್ಯಾರಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ರೂಪದರ್ಶಿ, ಜಿರೋ ಸೈಜಿನ ಬೆಡಗಿ ಎಂದೇ ಖ್ಯಾತರಾಗಿರುವ ಅಲನ್ನಾ ಪಾಂಡೆ ಇತ್ತೀಚೆಗೆ ಮಾಲ್ಡೀಸ್‌ ದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಐವೊರ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಮಾಲ್ಡೀವ್ಸ್‌ ಬೀಚ್‌ನಲ್ಲಿ ವಿಭಿನ್ನವಾಗಿ ಅಲನ್ನಾ ಪಾಂಡೆ ಪ್ರೇವ ನಿವೇದನೆ ಮಾಡಿದ್ದಾರೆ. ಇಬ್ಬರು ಪರಸ್ಪರ ಉಂಗುರ ಬದಲಾಯಿಸಿಕೊಂಡಿರುವುದು ಹಾಗೂ ಪರಸ್ಪರ ಚುಂಬಿಸುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಅಲನ್ನಾ ಪಾಂಡೆ ಅವರಿಗೆ ಶುಭಾಶಯಗಳನ್ನು ಕೋರುತ್ತಿರುವ ಅಭಿಮಾನಿಗಳು ನಿಮ್ಮ ವೈವಾಹಿಕ ಜೀವನ ಸುಂದರವಾಗಿರಲಿ ಎಂದು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು