ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮದುವೆ ಬಗ್ಗೆ ಮೌನ ಮುರಿದ ಅಲನ್ನಾ ಪಾಂಡೆ: ಏನಿರಬಹುದು?

Published : 8 ಜನವರಿ 2022, 9:06 IST
ಫಾಲೋ ಮಾಡಿ
Comments

ಬಾಲಿವುಡ್‌ನ ಮಾದಕ ಚೆಲುವೆ ಅನನ್ಯ ಪಾಂಡೆ ಅವರ ಸಹೋದರಿ ಅಲನ್ನಾ ಪಾಂಡೆ ತನ್ನ ಗೆಳೆಯ ಐವೊರ್‌ ಮ್ಯಾಕ್‌ಕ್ಯಾರಿ ಜತೆ ಕಳೆದ ನವೆಂಬರ್‌ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ನಿಶ್ಚಿತಾರ್ಥದ ಬಳಿಕ ಅವರು ಮೌನವಾಗಿದ್ದರು. ಇದೀಗ ಮದುವೆಕುರಿತು ಹೇಳಿಕೆ ನೀಡಿದ್ದಾರೆ.

ಐವೊರ್‌ ಮ್ಯಾಕ್‌ಕ್ಯಾರಿ ಜತೆಗಿನವಿವಾಹ ಬಗ್ಗೆ ಅಪ್ಡೇಟ್‌ ಕೊಟ್ಟಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗುವುದಾಗಿಹೇಳಿದ್ದಾರೆ. ಹಾಗೇ ನಿಶ್ಚಿತಾರ್ಥದ ಕಿರು ವಿಡಿಯೊವನ್ನು ಕೂಡ ಅವರು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.

ರೂಪದರ್ಶಿ, ಜಿರೋ ಸೈಜಿನ ಬೆಡಗಿ ಎಂದೇ ಖ್ಯಾತರಾಗಿರುವ ಅಲನ್ನಾ ನಿಶ್ಚಿತಾರ್ಥದ ಚಿತ್ರಗಳು, ವಿಡಿಯೊಗಳುಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದವು.

ಬೀಚ್‌ನಲ್ಲಿ ವಿಭಿನ್ನವಾಗಿ ಪ್ರೇವ ನಿವೇದನೆ, ಉಂಗುರ ಬದಲಾವಣೆ ಹಾಗೂ ಪರಸ್ಪರ ಚುಂಬಿಸುತ್ತಿರುವ ಚಿತ್ರಗಳನ್ನು ಅವರು ಪೋಸ್ಟ್‌ ಮಾಡಿದ್ದರು. ಈ ಚಿತ್ರಗಳನ್ನು ಅಭಿಮಾನಿಗಳು ಕೂಡ ಶೇರ್‌ ಮಾಡಿದ್ದರು.

ಮದುವೆಯ ವಿಚಾರ ಹೇಳಿರುವುದಕ್ಕೆ ಅಲನ್ನಾ ಪಾಂಡೆ ಅವರಿಗೆ ಶುಭಾಶಯಗಳನ್ನು ಕೋರುತ್ತಿರುವ ಅಭಿಮಾನಿಗಳು ನಿಮ್ಮ ವೈವಾಹಿಕ ಜೀವನ ಸುಂದರವಾಗಿರಲಿ ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT