ಬುಧವಾರ, ಫೆಬ್ರವರಿ 1, 2023
27 °C

‘ಅಲೆಗಳಿಲ್ಲದ ಸಾಗರ’ದಲ್ಲಿ ಹೊಸಬರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಅಲೆಗಳಿಲ್ಲದ ಸಾಗರ’ ಚಿತ್ರದ ಮುಹೂರ್ತ ಇತ್ತೀಚೆಗೆ ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ಸಾಗರ್ ಸಿನಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಕರುಣಾಕರ್ ರಾವಣ್ ಮತ್ತು ನಿರಂಜನ್‌ಮೂರ್ತಿ ಟಿ.ಎಸ್ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದಾರೆ.

ಸಾಗರ್ ಅವರು ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಕಂಪನಿ ಸಿಇಒ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ಚಿತ್ರವು ಗಂಡ ಹೆಂಡತಿ ಬಾಂಧವ್ಯ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿದೆ. ಒಂಟಿತನ ಸಹಿಸಲಾಗದೆ ಚಿಂತೆಗಳ ಸುಳಿಯಲ್ಲಿ ಸಿಲುಕುವ ಕಥೆಯಿದು. ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶವನ್ನು ಹೊಂದಿದೆ.  

ಮೋಹನ್ ಚಿತ್ರದ ನಾಯಕ. ವೈದ್ಯಳಾಗಿ ಬೇಲೂರಿನ ಅಶ್ವಿನ್‌ಶೆಟ್ಟಿ ತೀರ್ಥಹಳ್ಳಿಯ ಶಾನ್ವಿಗೌಡ ನಾಯಕಿಯರು. ಸೆಕ್ಯುರಿಟಿ ಗಾರ್ಡ್ ಆಗಿ ರಂಗ ಯಾದವ್‌ ಮಂಡ್ಯ ಇದ್ದಾರೆ. ಐದು ಜನರ ಸುತ್ತ ಕಥೆಯು ಸಾಗುತ್ತದೆ. ನಾಲ್ಕು ಹಾಡುಗಳಿಗೆ ಸಾಹಿತ್ಯ-ಸಂಗೀತ ಒದಗಿಸುತ್ತಿರುವುದು ಸಂಜೀವ್‌ರಾವ್. ಛಾಯಾಗ್ರಹಣ ರಾಘು ಎ.ರೂಗಿ, ಸಂಕಲನ ನವೀನ್, ನೃತ್ಯ ಸ್ಟಾರ್‌ನಾಗಿ, ಸಾಹಸ ಅಶೋಕ್ ಅವರದ್ದು. ಒಂದೇ ಹಂತದಲ್ಲಿ ನೆಲಮಂಗಲ ಸ್ಥಳದಲ್ಲಿ ಚಿತ್ರೀಕರಣ ನಡೆಸಿ, ಹಾಡಿಗೆ ವಿದೇಶಕ್ಕೆ ಹೋಗುವ ಇರಾದೆ ಇದೆ. ಕನ್ನಡ ಅಲ್ಲದೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಈ ಚಿತ್ರ ಮೂಡಿಬರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು