'ಆರ್ಆರ್ಆರ್' ಶೂಟಿಂಗ್ ಆರಂಭಿಸಿದ ಆಲಿಯಾ ಭಟ್

ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಆರ್ಆರ್ಆರ್"ನ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮಹಾಬಲೇಶ್ವರದಲ್ಲಿ ಚುರುಕಿನಿಂದ ಶೂಟಿಂಗ್ ಮುಗಿಸಿದ್ದ ಚಿತ್ರತಂಡ ಹೈದಾರಾಬಾದ್ಗೆ ಮರಳಿದೆ. ಸಿನಿಮಾದ ಪ್ರಮುಖ ಘಟ್ಟವನ್ನು ಅಲ್ಲಿ ಚಿತ್ರೀಕರಣ ಮಾಡಲಾಗಿತ್ತು.
ಈಗ ನಟಿ ಅಲಿಯಾ ಭಟ್ ಕೂಡ ಆರ್ಆರ್ಆರ್ ತಂಡ ಸೇರಿಕೊಂಡಿದ್ದಾರೆ. ಅಲ್ಲದೇ ಶೂಟಿಂಗ್ ಆರಂಭಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ಆರ್ಆರ್ಆರ್ ಬೆಡಗಿ. ‘ಕೊನೆಗೂ ಆರ್ಆರ್ಆರ್ ತಂಡ ಸೇರಿದೆ’ ಎಂದು ಪೋಸ್ಟ್ ಮಾಡಿದ್ದಾರೆ.
ಆಲಿಯಾ ಚಿತ್ರದಲ್ಲಿ ರಾಮ್ಚರಣ್ಗೆ ನಾಯಕಿಯಾಗಲಿದ್ದಾರೆ. ರಾಮ್ ಚರಣ್ ಅಲ್ಲುರಿ ಸೀತಾರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲುರಿ ಸೀತಾರಾಮ ರಾಜು ಪ್ರೇಯಸಿ ಸೀತಾ ಪಾತ್ರಕ್ಕೆ ಆಲಿಯಾ ಬಣ್ಣ ಹಚ್ಚಲಿದ್ದಾರೆ.
ಆರ್ಆರ್ಆರ್ ಸಿನಿಮಾಕ್ಕೆ ಆಲಿಯಾಯಿಂದ ಇನ್ನಷ್ಟು ತೂಕ ಹೆಚ್ಚಿರುವುದು ಸುಳ್ಳಲ್ಲ. ಸಿನಿಮಾಗಾಗಿ ಈ ಬೆಡಗಿ ತೆಲುಗು ಕಲಿತಿದ್ದಾರೆ. ತೆಲುಗು ಆವೃತ್ತಿಗೂ ಆಕೆಯೇ ಡಬ್ ಮಾಡುತ್ತಿರುವುದು ವಿಶೇಷ.
ಆರ್ಆರ್ಆರ್ನಲ್ಲಿ ಜೂನಿಯರ್ ಎನ್ಟಿಆರ್ ಕೂಡ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿಜಾಂ ಆಳ್ವಿಕೆಯ ವಿರುದ್ಧ ಹೋರಾಡಿದ ಕೋಮರಾಮ್ಭೀಮ್ ಪಾತ್ರದಲ್ಲಿ ಎನ್ಟಿಆರ್ ಕಾಣಿಸಿಕೊಳ್ಳಲಿದ್ದಾರೆ. ಡಿ.ವಿ.ವಿ ದಾನಯ್ಯ ಸಿನಿಮಾಗೆ ಹಣ ಹೂಡಿಕೆ ಮಾಡಿದ್ದಾರೆ. ಆರ್ಆರ್ಆರ್ ಸಿನಿಮಾವೂ ತೆಲುಗು, ಹಿಂದಿ, ತಮಿಳು, ಮಲೆಯಾಳಂ, ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.