ಆಲಿಯಾ ‘ನೆಚ್ಚಿನ ಮಹಿಳೆ’

ಮಂಗಳವಾರ, ಜೂನ್ 25, 2019
29 °C

ಆಲಿಯಾ ‘ನೆಚ್ಚಿನ ಮಹಿಳೆ’

Published:
Updated:
Prajavani

ಬಾಲಿವುಡ್‌ನ ಪ್ರತಿಭಾವಂತ ನಟಿ ಆಲಿಯಾ ಭಟ್ ಟೈಮ್ಸ್‌ನ ‘ನೆಚ್ಚಿನ ಮಹಿಳೆ’ 2018 ಆಗಿ ಆಯ್ಕೆಯಾಗಿದ್ದಾರೆ. ಜನಪ್ರಿಯತೆಯಲ್ಲಿ ಕತ್ರೀನಾ ಕೈಫ್, ದೀಪಿಕಾ ಪಡುಕೋಣೆ ಮತ್ತು ಸಾರಾ ಅಲಿ ಖಾನ್ ಅವರನ್ನೂ ಆಲಿಯಾ ಹಿಂದಿಕ್ಕಿರುವುದು ಗಮನೀಯ.

‘ಟೈಮ್ಸ್‌’ ಪತ್ರಿಕೆ ವಿವಿಧ ಕ್ಷೇತ್ರಗಳಲ್ಲಿನ ಮಹಿಳೆಯರ ಸಾಧನೆಯನ್ನು ಪಟ್ಟಿ ಮಾಡಿ, ಒಟ್ಟು 50 ಮಹಿಳೆಯರನ್ನು ಆಯ್ಕೆ ಮಾಡಿದೆ. ಸಿನಿಮಾ ಕ್ಷೇತ್ರದಲ್ಲಿ ಆಲಿಯಾ ಭಟ್ ನೆಚ್ಚಿನ ಮಹಿಳೆಯಾಗಿ ಹೊರಹೊಮ್ಮಿದ್ದಾರೆ. ಬಾಲಿವುಡ್‌ನ ಹೊಸ ಪ್ರತಿಭೆಗಳಲ್ಲಿ ಮುಂಚೂಣಿಯಲ್ಲಿರುವ ಆಲಿಯಾ ಅವರ ಸೆಕ್ಸ್ ಅಪೀಲ್, ಪ್ರತಿಭೆ ಮತ್ತು ಜನಪ್ರಿಯತೆಯನ್ನು ಆಧರಿಸಿ ಆಯ್ಕೆ ಮಾಡಲಾಗಿದೆ. ಆಯ್ಕೆ ಪ್ರಕ್ರಿಯೆಗಾಗಿ ಟೈಮ್ಸ್ ಆನ್‌ಲೈನ್‌ನಲ್ಲಿ ಮತದಾನವನ್ನೂ ಆಯೋಜಿಸಿತ್ತು. 

‘ರಾಜಿ’ ಸಿನಿಮಾದ ಮೂಲಕ ಪ್ರೇಕ್ಷಕರಷ್ಟೇ ಅಲ್ಲ ವಿಮರ್ಶಕರನ್ನೂ ಮಂತ್ರಮುಗ್ಧರನ್ನಾಗಿಸಿದ ಆಲಿಯಾ ಅಭಿನಯಕ್ಕೆ ಪ್ರಶಸ್ತಿಯೂ ದಕ್ಕಿದೆ. 

ರಣಬೀರ್ ಕಪೂರ್ ಜೊತೆಗಿನ ಸ್ನೇಹದ ಕಾರಣಕ್ಕಾಗಿ ಸದಾ ಸುದ್ದಿಯ ಕೇಂದ್ರಬಿಂದುವಾಗಿರುವ ಆಲಿಯಾ, ಫಿಲಂಫೇರ್ ಪ್ರಶಸ್ತಿ ಸಮಾರಂಭದಲ್ಲಿ ರಣಬೀರ್‌ಗೆ ಬಹಿರಂಗವಾಗಿಯೇ ಮುತ್ತಿಟ್ಟಿದ್ದರು. 

ಕಳೆದ ವರ್ಷ ಟೈಮ್ಸ್ ನೆಚ್ಚಿನ ಮಹಿಳೆಯಾಗಿ ಮಿಸ್ ವರ್ಲ್ಡ್‌ ಮಾನುಷಿ ಚಿಲ್ಲರ್ ನೆಚ್ಚಿನ ಮಹಿಳೆಯಾಗಿ ಆಯ್ಕೆಯಾಗಿದ್ದು, ಈ ವರ್ಷ ಅವರು 17ನೇ ಸ್ಥಾನದಲ್ಲಿದ್ದಾರೆ. 2017ರಲ್ಲಿ ದೀಪಿಕಾ ಪಡುಕೋಣೆ ಎರಡನೇ ಸ್ಥಾನದಲ್ಲಿದ್ದು. ಆಗ ಆಲಿಯಾ 37ನೇ ಸ್ಥಾನದಲ್ಲಿದ್ದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !