ಶುಕ್ರವಾರ, ಅಕ್ಟೋಬರ್ 30, 2020
27 °C

ನೀವು ಒಳ್ಳೆಯ ಮನುಷ್ಯ, ಬೇರೆ ಏನನ್ನೂ ನಂಬಬೇಡಿ: ಮಹೇಶ್ ಭಟ್‌ಗೆ ಆಲಿಯಾ ಶುಭಾಶಯ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ ಚಿತ್ರ ನಿರ್ದೇಶಕ ಮಹೇಶ್‌ ಭಟ್‌ ಅವರು 72ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ನಟಿ ಆಲಿಯಾ ಹಾಗೂ ಬರಹಗಾರ್ತಿ ಶಾಹೀನ್‌ ಅವರು ತಮ್ಮ ತಂದೆ ಮಹೇಶ್‌ ಭಟ್‌ಗೆ ಹೃದಯಸ್ಪರ್ಶಿ ಶುಭಾಶಯ ಕೋರಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. 

ನಾನು ದೀರ್ಘವಾದದ್ದನ್ನು ಏನೂ ಹೇಳುವುದಿಲ್ಲ. ಹೇಳುವಷ್ಟು ಬುದ್ಧಿವಂತೆಯೂ ಅಲ್ಲ. ಆದರೆ, ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಅದು ನಮ್ಮ ನೆಚ್ಚಿನ ಚಿತ್ರದ ಸಾಲುಗಳಾಗಿವೆ ಎಂದಿರುವ ಆಲಿಯಾ, 'ಒಂದು ಸಾರಿ ನಿಮ್ಮೊಳಗೆ ನೀವು ನೋಡಿಕೊಳ್ಳಿ. ಈಗ ನೀವು ಏನಾಗಿದ್ದೀರೋ ಅದಕ್ಕಿಂತ ಹೆಚ್ಚಿನವರೇ ಆಗಿರುತ್ತೀರಿ. ನೀವು ಯಾರೆಂದು... ನೆನಪಿಟ್ಟುಕೊಳ್ಳಿ. ಹ್ಯಾಪಿ ಬರ್ತಡೇ ಮುಸಾಫಾ. ನೀವು ಒಳ್ಳೆಯ ಮನುಷ್ಯ. ಬೇರೆ ಏನನ್ನೂ ನಂಬಬೇಡಿ' ಎಂದು ಬರೆದುಕೊಂಡಿದ್ದಾರೆ. 

ಮಹೇಶ್ ಭಟ್‌ ಅವರ ಹಿರಿಯ ಮಗಳು ಶಾಹೀನ್ ತಮ್ಮ ತಂದೆಯ ಮಡಿಲಲ್ಲಿ ಮಲಗಿಕೊಂಡಿರುವ ಹಳೆಯ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. 

'ನಿರ್ಭಯವಾಗಿರುವುದು ನಾನು ನನ್ನ ತಂದೆಯಿಂದ ಕಲಿತಿರುವ ದೊಡ್ಡ ಪಾಠವಾಗಿದೆ. ನನ್ನ ಬಗ್ಗೆ ನಾನೇ ತಿಳಿದುಕೊಳ್ಳುವ ವಿಚಾರದಲ್ಲಿ ಎಂದಿಗೂ ಭಯಪಡಬಾರದೆಂದು ಅವರು ನನಗೆ ಕಲಿಸಿಕೊಟ್ಟಿದ್ದಾರೆ' ಎಂದು ಶಾಹೀನ್‌ ತಿಳಿಸಿದ್ದಾರೆ.
 

 
 
 
 

 
 
 
 
 
 
 
 
 

Old words that ring as true today: "I believe that what we become depends on what our fathers teach us at odd moments, when they aren't trying to teach us. We are formed by little scraps of wisdom." There is no counting the lessons I've received from my father and he's never short of profundity or sweeping words of wisdom about the state of the world we live in when sometimes all you're trying to do is leave the house. My father's greatest lesson to me has been in fearlessness, it has been in teaching me to never be afraid of who I am. He taught me how all the reasons I think I can't fit into the world are actually all the reasons I can - then he taught me how overrated fitting in is. Happy Birthday my Papa, my greatest ally.

A post shared by Shaheen Bhatt (@shaheenb) on

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು