ಭಾನುವಾರ, ಮೇ 16, 2021
22 °C

ಸ್ವಿಸ್‌ನಲ್ಲಿ ಐಸ್‌ಕ್ರೀಂ ಸವಿದ ಆಲಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಟಿಟ್ಜರ್‌ಲೆಂಡ್‌ನಲ್ಲಿರುವ ಆಲಿಯಾ ಭಟ್ ಈಗ ಮಸ್ತ್ ಮಜಾ ಮೂಡ್‌ನಲ್ಲಿದ್ದಾರೆ. ಅಲ್ಲಿನ ನೀಲಿ ಆಗಸ, ಎಳೆ ಬಿಸಿಲು ಮತ್ತು ಹಚ್ಚ ಹಸಿರಿನ ಪರಿಸರದ ನಡುವೆ ಐಸ್‌ ಕ್ರೀಂ ತಿನ್ನುತ್ತಾ ಆಲಿಯಾ ಮಜ ಅನುಭವಿಸುತ್ತಿದ್ದಾರೆ. ಐಸ್ ಕ್ರೀಂ ತಿನ್ನುತ್ತಿರುವ ಫೋಟೊವೊಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಆಲಿಯಾ, ‘ದ್ವೇಷ ತುಂಬಿದ ಜಗತ್ತಿನಲ್ಲಿ, ಪ್ರೀತಿ ಹಂಚಿ... ಮತ್ತು ಐಸ್ ಕ್ರೀಂ ಸವಿಯಿರಿ’ ಅನ್ನುವ ಒಕ್ಕಣೆಯನ್ನೂ ಹಾಕಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ‘ವೀರೆ ದಿ ವೆಡ್ಡಿಂಗ್’ ಸಿನಿಮಾದ ನಿರ್ಮಾಪಕಿ ರಿಯಾ ಕಪೂರ್ ‘ಡ್ಯಾಮ್ ಯು ಭಟ್, ಈಗ ನಾನು ಇಡೀ ದಿನ ಐಸ್‌ಕ್ರೀಂ ಬಗ್ಗೆಯೇ ಯೋಚಿಸುತ್ತಿರುವೆ’ ಎಂದಿದ್ದರೆ, ‘ಸರೋವರ ಎಲ್ಲಿ?’ ಎಂದು ಅರ್ಜುನ್ ಕಪೂರ್ ಕಾಲೆಳೆದಿದ್ದಾರೆ. ಈ ಹಿಂದೆ ಇಟಲಿಗೆ ಗೆಳೆಯ ರಣಬೀರ್ ಕಪೂರ್ ಜತೆಗೆ ತೆರಳಿದ್ದಾಗ ಆಲಿಯಾ, ಕೊಮೊ ಸರೋವರದಲ್ಲಿ ಕಾಲ ಕಳೆದಿದ್ದರು. ಅದನ್ನು ನೆನಪಿಸಿಕೊಂಡು ಅರ್ಜುನ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. 

ಐಸ್‌ಕ್ರೀಂ ಪೋಸ್ಟ್‌ಗೂ ಮುನ್ನ ಕಿತ್ತಲೆ ಬಣ್ಣದ ಉಡುಪಿನಲ್ಲಿದ್ದ ಭಾವಚಿತ್ರವೊಂದನ್ನು ಪೋಸ್ಟ್ ಮಾಡಿದ್ದ ಆಲಿಯಾ, ಅದಕ್ಕೆ ‘ಬೆಳಕು ತುಂಬಿರುವ ಆತ್ಮ’ ಎನ್ನುವ ಶೀರ್ಷಿಕೆ ಕೊಟ್ಟಿದ್ದಾರೆ. 

‘ಬ್ರಹ್ಮಾಸ್ತ್ರ’ದಲ್ಲಿ ರಣಬೀರ್ ಕ‍ಪೂರ್ ಜತೆಗೆ ನಟಿಸಿರುವ ಆಲಿಯಾ, ಚಿತ್ರೀಕರಣಕ್ಕಾಗಿ ವಿದೇಶಗಳಿಗೆ ಜತೆಯಾಗಿಯೇ ತೆರಳಿದ್ದರು. ಆಗಲೂ ರಣಬೀರ್–ಆಲಿಯಾ ಗಾಳಿಸುದ್ದಿಗೆ ಆಹಾರವಾಗಿದ್ದರು. ಈ ಚಿತ್ರದಲ್ಲಿ ರಣಬೀರ್ ಶಿವ ಅನ್ನುವ ಪಾತ್ರದಲ್ಲಿ ನಟಿಸುತ್ತಿದ್ದರೆ, ಆಲಿಯಾ, ಇಶಾ ಅನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಬ್ರಹ್ಮಾಸ್ತ್ರ’ ಇದೇ ಡಿಸೆಂಬರ್‌ ವೇಳೆಗೆ ತೆರೆ ಕಾಣಲಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು