ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್ನ ಭಾಗವಾದ, ಆಲಿಯಾ ಭಟ್ ಹಾಗೂ ಶಾರ್ವರಿ ಮುಖ್ಯಭೂಮಿಕೆಯಲ್ಲಿರುವ ‘ಆಲ್ಫಾ’ ಸಿನಿಮಾ ಜುಲೈ 10ರಂದು ಬಿಡುಗಡೆಯಾಗಲಿದೆ.

‘ದಿ ರೈಲ್ವೆ ಮೆನ್’ ನಿರ್ದೇಶಿಸಿದ್ದ ಶಿವ್ ರವೈಲ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಬಾಬಿ ಡಿಯೋಲ್, ಅನಿಲ್ ಕಪೂರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. 2025ರ ಡಿಸೆಂಬರ್ನಲ್ಲೇ ತೆರೆಕಾಣಬೇಕಿದ್ದ ಈ ಸಿನಿಮಾ ಮುಂದೂಡಿಕೆಯಾಗಿ ಏ.17ಕ್ಕೆ ನಿಗದಿಯಾಗಿತ್ತು. ಇದೀಗ ಜುಲೈನಲ್ಲಿ ಸಿನಿಮಾ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ತಿಳಿಸಿದೆ.

ಈಗಾಗಲೇ ತನ್ನ ಸ್ಪೈ ಯೂನಿವರ್ಸ್ನಲ್ಲಿ ಶಾರುಖ್ ಖಾನ್ ನಟನೆಯ ‘ಪಠಾಣ್’, ಸಲ್ಮಾನ್ ಖಾನ್ ನಟನೆಯ ‘ಟೈಗರ್’ ಹಾಗೂ ಹೃತಿಕ್ ರೋಷನ್ ನಟನೆಯ ‘ವಾರ್’ ಸಿನಿಮಾಗಳನ್ನು ಯಶ್ ರಾಜ್ ಫಿಲ್ಮ್ಸ್(ವೈಆರ್ಎಫ್) ನಿರ್ಮಿಸಿದೆ. 2012ರಲ್ಲಿ ‘ಏಕ್ ಥಾ ಟೈಗರ್’ ಸಿನಿಮಾ ಮೂಲಕ ಈ ಮಾದರಿಯ ಸಿನಿಮಾಗಳನ್ನು ವೈಆರ್ಎಫ್ ಪ್ರಾಂಭಿಸಿತ್ತು. ‘ಆಲ್ಫಾ’ ಜೊತೆಗೆ ‘ಪಠಾಣ್–2’ ಹಾಗೂ ಸಲ್ಮಾನ್–ಶಾರುಖ್ ಜೊತೆಯಾಗಿರಲಿರುವ ‘ಟೈಗರ್ ವರ್ಸಸ್ ಪಠಾಣ್’ ಸಿನಿಮಾದ ನಿರ್ಮಾಣಕ್ಕೂ ವೈಆರ್ಫ್ ಮುಂದಾಗಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.