ಮಲಯಾಳ ನಟ, ನಿರ್ದೇಶನಕ ಬಾಸಿಲ್ ಜೋಸೆಫ್ ತೆಲುಗಿನ ಜನಪ್ರಿಯ ನಟ ಅಲ್ಲು ಅರ್ಜುನ್ ಅವರ 25ನೇ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ.

ನಟನಾಗಿ ಹೆಚ್ಚು ಗುರುತಿಸಿಕೊಂಡಿರುವ ಬಾಸಿಲ್, 2021ರಲ್ಲಿ ತೆರೆಕಂಡು ಯಶಸ್ವಿಯಾದ ‘ಮಿನ್ನಲ್ ಮುರಳಿ’ ಚಿತ್ರದ ಬಳಿಕ ಬೇರೆ ಯಾವುದೇ ಚಿತ್ರ ಕೈಗೆತ್ತಿಕೊಂಡಿರಲಿಲ್ಲ. ‘ಜಯ ಜಯ ಜಯ ಹೇ’ ಚಿತ್ರದ ಯಶಸ್ಸಿನ ಬಳಿಕ ನಾಯಕನಾಗಿ ಬಾಸಿಲ್ ಒಂದರ ಹಿಂದೊಂದು ಉತ್ತಮ ಚಿತ್ರಗಳನ್ನು ನೀಡುತ್ತಿದ್ದಾರೆ. ‘ಸೂಕ್ಷ್ಮ ದರ್ಶಿನಿ’, ‘ಗುರುವಾಯೂರು ಅಂಬಲನಡಾಯಿಲ್’, ‘ಪೊನ್ಮ್ಯಾನ್’ ಚಿತ್ರಗಳು ಅವರಿಗೆ ನಟನಾಗಿ ಇನ್ನಷ್ಟು ಜನಪ್ರಿಯತೆ ತಂದುಕೊಟ್ಟಿವೆ. ಹೀಗಾಗಿ ನಟನೆಯತ್ತಲೇ ಹೆಚ್ಚು ಒಲವು ತೋರಿರುವ ಬಾಸಿಲ್ ಈ ಸಲ ಮತ್ತೊಂದು ಹಾಸ್ಯಭರಿತ ಕಥೆಯೊಂದಿಗೆ ಅಲ್ಲು ಅರ್ಜುನ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

ಅಲ್ಲು ಅರ್ಜುನ್ ಈಗಾಗಲೇ ತಮಿಳಿನ ಜನಪ್ರಿಯ ನಿರ್ದೇಶಕರಾದ ಅಟ್ಲಿ ಮತ್ತು ಲೋಕೇಶ್ ಕನಗರಾಜ್ ಜತೆ ಸಿನಿಮಾವನ್ನು ಘೋಷಿಸಿದ್ದಾರೆ. ಅಟ್ಲಿ ಜತೆಗಿನ ಸಿನಿಮಾದ ಶೀರ್ಷಿಕೆ ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಈ ಎರಡು ಸಿನಿಮಾಗಳು ಮುಗಿದ ಬಳಿಕವೇ ಅಲ್ಲು ಅರ್ಜುನ್ ಮುಂದಿನ ಸಿನಿಮಾದತ್ತ ಯೋಚಿಸುವುದು. ಹೀಗಾಗಿ ಬಾಸಿಲ್ ಜತೆಗಿನ ಸಿನಿಮಾ ಮಾತುಕತೆ ಹಂತದಲ್ಲಿರಬಹುದಷ್ಟೆ, ತಕ್ಷಣಕ್ಕೆ ಸೆಟ್ಟೇರುವುದು ಕಷ್ಟ ಎಂದು ಮೂಲಗಳನ್ನು ಉಲ್ಲೇಖಿಸಿ ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಮೂರು ಸಿನಿಮಾಗಳನ್ನು ನಿರ್ದೇಶಿಸಿ, 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಬಾಸಿಲ್ ಹಾಸ್ಯಮಯ ಪಾತ್ರ ಮತ್ತು ಬರವಣಿಗೆಯಿಂದ ಜನಪ್ರಿಯ. ‘ಪುಷ್ಪ’ದಂಥ ಮಾಸ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್, ಬಾಸಿಲ್ ಜತೆಗೆ ಕೈಜೋಡಿಸುವುದು ಹೊಸ ಬಗೆಯ ನಿರೀಕ್ಷೆಯನ್ನು ಹುಟ್ಟುಹಾಕುವುದಂತೂ ಸುಳ್ಳಲ್ಲ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-51-1514495952

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.