ತೆಲುಗು ನಟ ಅಲ್ಲು ಅರ್ಜುನ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ನಿನ್ನೆ (ಮಾರ್ಚ್.2) ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಅವರ ಆರತಕ್ಷತೆ ಸಮಾರಂಭ ನಡೆದಿದೆ. ಈ ಸಮಾರಂಭಕ್ಕೆ ತೆಲುಗು ಚಿತ್ರರಂಗದ ಜನಪ್ರಿಯ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ರಾಜಕೀಯ ಗಣ್ಯರು, ಕುಟುಂಬಸ್ಥರು, ಸ್ನೇಹಿತರು ಭಾಗಿಯಾಗಿದ್ದರು.

ಮಾರ್ಚ್ 6ರಂದು ನಟ ಅಲ್ಲು ಸಿರೀಶ್ ಅವರು ಪ್ರೀತಿಸಿದ ಹುಡುಗಿ ನಯನಿಕಾ ರೆಡ್ಡಿ ಜೊತೆ ಹಸೆಮಣೆ ಏರಲಿದ್ದಾರೆ. ಕಳೆದ ವರ್ಷ ಅ.31ರಂದು ಹೈದರಾಬಾದ್ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ಉಂಗುರ ಬದಲಾಯಿಸಿಕೊಂಡಿದ್ದರು.

ನಿನ್ನೆ ನಡೆದ ಅಲ್ಲು ಸಿರೀಶ್ ಹಾಗೂ ನಯನಿಕಾ ರೆಡ್ಡಿ ಅವರ ಆರತಕ್ಷತೆ ಸಮಾರಂಭಕ್ಕೆ ನಟ ರಾಮ್ ಚರಣ್, ಅಕ್ಕಿನೇನಿ ನಾಗಾರ್ಜುನ ಮತ್ತು ಅವರ ಪುತ್ರ ನಾಗ ಚೈತನ್ಯ, ನಾನಿ, ಪುಷ್ಪ ಚಿತ್ರದ ನಿರ್ದೇಶಕರಾದ ಸುಕುಮಾರ್, ನಿರ್ದೇಶಕ, ನಿರ್ಮಾಪಕ ಅಟ್ಲಿ ಕುಮಾರ್ ಹಾಗೂ ರಾಜಕೀಯ ಗಣ್ಯರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.