ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್‌ ಸಿರೀಸ್‌ನಲ್ಲಿ ಪರ್ವೀನ್‌– ಭಟ್‌ ಪ್ರೇಮಕತೆ...

Last Updated 28 ಜನವರಿ 2020, 19:45 IST
ಅಕ್ಷರ ಗಾತ್ರ

ತೆಲುಗಿನ ‘ಲಸ್ಟ್‌ ಸ್ಟೋರಿಸ್‌’ ಮೂಲಕ ವೆಬ್‌ಲೋಕ ಪ್ರವೇಶಿಸಿದ್ದ ನಟಿ ಅಮಲಾ ಪಾಲ್‌ ಈಗ ಇನ್ನೊಂದು ವೆಬ್‌ ಸಿರೀಸ್‌ಗೆ ಸಹಿ ಹಾಕಿದ್ದಾರೆ. ಹಿರಿಯ ಬಾಲಿವುಡ್‌ ನಿರ್ದೇಶಕ ಮಹೇಶ್‌ ಭಟ್‌ ಅವರ ವೆಬ್‌ ಸಿರೀಸ್‌ನಲ್ಲಿ ಅಮಲಾ ನಟಿಸಲಿದ್ದಾರೆ.

ಮಹೇಶ್‌ ಭಟ್‌ ಅವರ ಒಂದು ಕಾಲದ ಗೆಳತಿ ಪರ್ವೀನ್‌ ಬಾಬಿ ಜೀವನ ಕತೆ ಆಧರಿತ ವೆಬ್ ಸಿರೀಸ್‌ನಲ್ಲಿಅಮಲಾ, ಪರ್ವೀನ್‌ ಬಾಬಿ ಪಾತ್ರ ನಿರ್ವಹಿಸಲಿದ್ದಾರೆ.

ಈ ವಿಚಾರವನ್ನು ಮಹೇಶ್‌ ಭಟ್‌ ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ‘ಇದು ಸರಿಯಾದ ಸಮಯ. ಜಿಯೊ ಸ್ಟುಡಿಯೊ ಜೊತೆ ಡಿಜಿಟಲ್‌ ಲೋಕಕ್ಕೆ ಕಾಲಿಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಈ ವೆಬ್‌ಸಿರೀಸ್‌ನಲ್ಲಿ 70 ದಶಕದಲ್ಲಿ ಬಾಲಿವುಡ್‌ನಲ್ಲಿ ನೆಲೆಯೂರಲು ಒದ್ದಾಡುತ್ತಿದ್ದ ನಿರ್ದೇಶಕ ಹಾಗೂ ಆ ಕಾಲದ ಖ್ಯಾತ ನಟಿಯ ಪ್ರೇಮ ಸಂಬಂಧದ ಬಗ್ಗೆ ಕತೆ ಇರುತ್ತದೆ. ಜಗತ್ತಿನಲ್ಲಿ ಅತ್ಯುತ್ತಮ ಸ್ಥಳವೆಂದರೆ ಮನುಷ್ಯನ ಹೃದಯ’ ಎಂದು ಬರೆದುಕೊಂಡಿದ್ದರು.

ಈಗಾಗಲೇ ವೆಬ್‌ಸಿರೀಸ್‌ ಕುರಿತು ಒಂದು ಹಂತದ ಮಾತುಕತೆ ಪೂರ್ಣಗೊಂಡಿದ್ದು, ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಇದೆ.

ಅನೇಕ ಕಮರ್ಷಿಯಲ್‌ ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಅಮಲಾ ಕಳೆದ ವರ್ಷ ತಮಿಳಿನ ‘ಅಡೈ’ ಚಿತ್ರದಲ್ಲಿ ನಟಿಸಿದ್ದರು. ಇದು ಮಹಿಳಾ ಕೇಂದ್ರಿತ ಸಿನಿಮಾವಾಗಿದ್ದು, ಅದರ ಟೀಸರ್‌, ಪೋಸ್ಟರ್‌ಗಳಲ್ಲಿಅಮಲಾ ನಗ್ನಳಾಗಿ ಕಾಣಿಸಿಕೊಂಡ ದೃಶ್ಯಗಳು ಭಾರಿ ಸುದ್ದಿಯಾಗಿದ್ದವು.

‘ಲಸ್ಟ್‌ ಸ್ಟೋರಿಸ್‌’ ಅಮಲಾ ಪೌಲ್‌ ನಟನೆಯ ಮೊದಲ ವೆಬ್‌ ಸಿರೀಸ್‌. ಇದನ್ನು ನಂದಿನಿ ರೆಡ್ಡಿ ನಿರ್ದೇಶಿಸಿದ್ದರು. ನೆಟ್‌ಫ್ಲಿಕ್ಸ್‌ ನಿರ್ಮಾಣ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT