ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶನದ ‘ಅಮೆರಿಕಾ!ಅಮೆರಿಕಾ!!’ ಚಿತ್ರ ಬಿಡುಗಡೆಗೊಂಡು 29 ವರ್ಷಗಳು ಕಳೆದಿವೆ. ರಮೇಶ್ ಅರವಿಂದ್, ಹೇಮಾ ಪಂಚಮುಖಿ, ಅಕ್ಷಯ್ ಆನಂದ್ ನಟನೆಯ ಚಿತ್ರ ಆ ಕಾಲಕ್ಕೆ ಮೋಡಿ ಮಾಡಿತ್ತು. ಇದೀಗ ಚಿತ್ರದ ಮುಂದುವರಿದ ಭಾಗವನ್ನು ನಾಗತಿಹಳ್ಳಿ ಘೋಷಿಸಿದ್ದಾರೆ.

‘ಸಹನಾ ವಿಜಯಕುಮಾರ್ ಅವರ ‘ಕ್ಷಮೆ’ ಕಾದಂಬರಿ ಆಧಾರಿತ ಚಿತ್ರ. ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್, ಸಾನ್ವಿ ಶ್ರೀವಾಸ್ತವ್, ಅಚ್ಯುತ್ ಕುಮಾರ್, ಮಂಡ್ಯ ರಮೇಶ್, ಮಾನಸಿ ಸುಧೀರ್ ಸೇರಿದಂತೆ ಅಮೆರಿಕದ ಕೆಲ ಕಲಾವಿದರೂ ನಟಿಸಿದ್ದಾರೆ. ಅಮೆರಿಕದ ಸಿಯಾಟಲ್ ನಗರದಲ್ಲಿ ಎಪ್ಪತ್ತೈದು ಭಾಗ ಚಿತ್ರೀಕರಣಗೊಂಡಿದೆ. ಹಂಗೇರಿಯ ಬುಡಾಪೆಸ್ಟ್ ನಲ್ಲಿ ಸಿಂಫೋನಿ ಸಂಗೀತವನ್ನು ವಿಶೇಷವಾಗಿ ಧ್ವನಿಮುದ್ರಿಸಲಾಗಿದೆ’ ಎಂದು ಚಿತ್ರ ಕುರಿತು ನಾಗತಿಹಳ್ಳಿ ಮಾಹಿತಿ ನೀಡಿದ್ದಾರೆ.

‘ಮೊದಲ ಚಿತ್ರ ನಾನು ರೂಪಿಸಿದ್ದಲ್ಲ; ನನ್ನನ್ನೇ ರೂಪಿಸಿದ ಸಿನಿಮಾ! ಕೋಟಿ ಕೋಟಿ ಕಂಗಳಿಗೆ ಕನಸು ಕೊಟ್ಟ ಸಿನಿಮಾ. ಕೋಟಿ ಕೋಟಿ ಮನಗಳಿಗೆ ಮಮಕಾರವಿತ್ತ ಸಿನಿಮಾ. ಕನ್ನಡ ಜನತೆಗೆ ಕೋಟಿ ಕೋಟಿ ಕೃತಜ್ಞತೆಗಳು. ಸದ್ಯದಲ್ಲೇ ನಿಮ್ಮೆದುರು ‘ಅಮೆರಿಕಾ! ಅಮೆರಿಕ!!–2 ಬರಲಿದೆ’ ಎಂದು ಅವರು ಹೇಳಿದ್ದಾರೆ.

ಚಿತ್ರಕ್ಕೆ ಮನೋಮೂರ್ತಿ ಸಂಗೀತವಿದೆ. ಮೊದಲ ಭಾಗಕ್ಕೂ ಅವರದ್ದೇ ಸಂಗೀತವಿದ್ದು, ಹಾಡುಗಳು ಮೋಡಿ ಮಾಡಿದ್ದವು. ಎಸ್.ಕೆ.ರಾವ್ ಛಾಯಾಚಿತ್ರಗ್ರಹಣ, ಶ್ರೀ ಕ್ರೇಜಿ ಮೈಂಡ್ ಸಂಕಲನವಿದೆ.

ಸದ್ಯ ಟೆಂಟ್ ಸಿನಿಮಾ ಮೂಲಕ ಸಿನಿಮಾ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ನಾಗತಿಹಳ್ಳಿ ನಿರ್ದೇಶನ ಕಡಿಮೆ ಮಾಡಿದ್ದಾರೆ. 2020ರಲ್ಲಿ ತೆರೆಕಂಡ ‘ಇಂಡಿಯಾ vs ಇಂಗ್ಲೆಂಡ್’ ಅವರ ಹಿಂದಿನ ಸಿನಿಮಾ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-51-1212864351

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.