‘ಸಪ್ತ ಸಾಗರದಾಚೆ ಎಲ್ಲೋ’ ಈ ಹಾಡು ಕಿವಿಗೆ ಬಿದ್ದಾಗ ಮನಸ್ಸಿನಲ್ಲೇ ಪದೇ ಪದೇ ರಿರಿಲೀಸ್ ಆಗುವ ಸಿನಿಮಾ ‘ಅಮೆರಿಕಾ ಅಮೆರಿಕಾ’. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಸಿನಿಮಾಕ್ಕೀಗ 30 ವರ್ಷದ ಸಂಭ್ರಮ.

ಈ ಸಂಭ್ರಮದ ಕ್ಷಣವನ್ನು ನಿರ್ದೇಶಕರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ನೆನಪಿಸಿಕೊಂಡಿದ್ದಾರೆ. ‘ಅಮೆರಿಕಾ ಅಮೆರಿಕಾ’ಚಿತ್ರವು 1997ರ ಏಪ್ರಿಲ್ 11ರಂದು ಬಿಡುಗಡೆಯಾಯಿತು. ಈ ಚಿತ್ರವನ್ನು ನಾನು ರೂಪಿಸಿದ್ದಲ್ಲ; ನನ್ನನ್ನೇ ರೂಪಿಸಿದ ಸಿನಿಮಾ. ಕೋಟಿ ಕೋಟಿ ಕಂಗಳಿಗೆ ಕನಸು ಕೊಟ್ಟ ಚಿತ್ರವಿದು. ಕೋಟಿ ಕೋಟಿ ಮನಗಳಿಗೆ ಮಮಕಾರವಿತ್ತ ಸಿನಿಮಾ. ಈ ಚಿತ್ರವನ್ನು ಗೆಲ್ಲಿಸಿದ ಕನ್ನಡ ಜನತೆಗೆ ಕೋಟಿ ಕೋಟಿ ಕೃತಜ್ಞತೆ‘ ಎಂದ ಅವರು, ಈ ಚಿತ್ರದ ಮುಂದುವರಿದ ಭಾಗ ಸದ್ಯದಲ್ಲೇ ಬರಲಿದೆ ಎಂದು ಸುಳಿವು ನೀಡಿದ್ದಾರೆ.
.‘ಜನ ನಾಯಗನ್’ ಸೋರಿಕೆ: ಕೆವಿಎನ್ ಪ್ರೊಡಕ್ಷನ್ಸ್ ಪರವಾಗಿ ನಿಲ್ಲುವೆ ಎಂದ ನಟ ರಿಷಬ್.‘ಕುಂಭಮೇಳ’ದ ಮೊನಾಲಿಸಾ ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲು.
ನಟಿ ಹೇಮಾ ಪ್ರಭಾತ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಚಿತ್ರದ ಹಾಡಿನ ಸಾಲು ಹಂಚಿಕೊಂಡು 'ನೆನಪೆಂದರೆ ಮಳೆಬಿಲ್ಲ ಛಾಯೆ' ಎಂದು ಬರೆದುಕೊಂಡಿದ್ದಾರೆ.

ಚಿತ್ರದಲ್ಲಿ ‘ಸೂರ್ಯ’ನಾಗಿ ರಮೇಶ್, ‘ಭೂಮಿ’ಯಾಗಿ ನಟಿ ಹೇಮಾ ಪ್ರಭಾತ್ ಹಾಗೂ ‘ಶಶಾಂಕ್’ ಪಾತ್ರದಲ್ಲಿ ಅಕ್ಷಯ್ ಆನಂದ್ ಹಾಗೂ ದತ್ತಣ್ಣ, ವೈಶಾಲಿ ಕಾಸರವಳ್ಳಿ ಸೇರಿ ಅನೇಕರು ನಟಿಸಿದ್ದರು. ಇನ್ನೂ, ಈ ಚಿತ್ರದ ‘ನೂರು ಜನ್ಮಕೂ’, ‘ಯಾವ ಮೋಹನ ಮುರಳಿ ಕರೆಯಿತು’, ‘ಬಾನಲ್ಲಿ ಓಡೊ ಮೇಘ’ ಹಾಡುಗಳು ಕನ್ನಡಿಗರ ಮನದಲ್ಲಿ ಹಚ್ಚಹಸಿರಾಗಿ ಉಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.