ಶನಿವಾರ, ಜುಲೈ 24, 2021
25 °C

ಅಮೆರಿಕ: ಜುಲೈನಿಂದ ಸಿನಿಮಾ ಪ್ರದರ್ಶನ

ನ್ಯೂಯಾರ್ಕ್‌ ಟೈಮ್ಸ್‌ Updated:

ಅಕ್ಷರ ಗಾತ್ರ : | |

movie theater

ಲಾಸ್ ಏಂಜಲಿಸ್: ವಿಶ್ವದ ಹಲವೆಡೆ ಸಿನಿಮಾ ಮಂದಿರಗಳ ಬಾಗಿಲು ತೆರೆಯುತ್ತಿದೆ. ವಿಶ್ವದ ಅತಿದೊಡ್ಡ ಮಲ್ಟಿಪ್ಲೆಕ್ಸ್ ಕಂಪನಿ ಎಂಬ ಹೆಗ್ಗಳಿಕೆ ಹೊಂದಿರುವ ಎಎಂಸಿ ಥಿಯೇಟರ್ಸ್‌ ಅಮೆರಿಕ ಮತ್ತು ಬ್ರಿಟನ್ನಿನ ‘ಬಹುತೇಕ ಎಲ್ಲ’ ಕಡೆಗಳಲ್ಲಿ ತನ್ನ ಮಲ್ಟಿಪ್ಲೆಕ್ಸ್‌ಗಳು ಜುಲೈ ತಿಂಗಳಲ್ಲಿ ಬಾಗಿಲು ತೆರೆಯಲಿವೆ ಎಂದು ಪ್ರಕಟಿಸಿದೆ.

ಇನ್ನು ಮೂರು ವಾರಗಳಲ್ಲಿ ಹಾಲಿವುಡ್‌ನಿಂದ ಹೊಸ ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಲಿವೆ. ‘ಅನ್‌ಹಿಂಜ್ಡ್‌’ ಸಿನಿಮಾ ಜುಲೈ ಮೊದಲ ವಾರದಲ್ಲಿ, ‘ಟೆನೆಟ್’ ಸಿನಿಮಾ ಜುಲೈ ಮಧ್ಯ ಭಾಗದಲ್ಲಿ ತೆರೆಗೆ ಬರಲಿವೆ.

ಆದರೆ, ಜನ ಸಿನಿಮಾ ಮಂದಿರಗಳಿಗೆ ಬಂದು ಸಿನಿಮಾ ವೀಕ್ಷಣೆ ಮಾಡುವರೇ ಎಂಬ ಪ್ರಶ್ನೆ ಪ್ರದರ್ಶಕರನ್ನು, ಸಿನಿಮಾ ಮಂದಿಯನ್ನು ಕಾಡುತ್ತಿದೆ. ‘ಸಿನಿಮಾ ಮಂದಿರಗಳಲ್ಲಿನ ಸಂಪೂರ್ಣ ಸುರಕ್ಷಿತ ವಾತಾವರಣ ಇರುತ್ತದೆ ಎಂಬ ಭರವಸೆ ಸಿನಿಪ್ರೇಮಿಗಳಿಗೆ ಬೇಕಾಗಿದೆ’ ಎಂಬ ಮಾತು ಅಲ್ಲಿ ಕೇಳಿಬರುತ್ತಿದೆ.

ತಾವು ಕೈಗೊಂಡಿರುವ ಸುರಕ್ಷತಾ ಕ್ರಮಗಳು ಸಿನಿಪ್ರೇಮಿಗಳ ಮನಸ್ಸಿನಲ್ಲಿ ಕೊರೊನಾ ವೈರಾಣು ವಿಚಾರವಾಗಿ ಇರುವ ಭಯವನ್ನು ದೂರಮಾಡಲು ಸಾಕು ಎಂದು ಸಿನಿಮಾ ಮಂದಿರಗಳ ಪ್ರತಿನಿಧಿಗಳು ಭಾವಿಸಿದ್ದಾರೆ. ಸಿನಿಮಾ ಮಂದಿರಗಳಲ್ಲಿ ಕೆಲಸ ಮಾಡುವವರು ಮಾಸ್ಕ್‌ ಧರಿಸಿ ಕೆಲಸ ಮಾಡಲಿದ್ದಾರೆ. ಸಿನಿಮಾ ವೀಕ್ಷಿಸಲು ಬರುವವರು ಕೂಡ ಮಾಸ್ಕ್‌ ಧರಿಸುವಂತೆ ಸಲಹೆ ನೀಡುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು