ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹನಟನಿಗೆ ಹೊಡೆದಿದ್ದ ಸ್ಮಿತ್, ಕಾರ್ಯಕ್ರಮ ತೊರೆಯಲು ನಿರಾಕರಿಸಿದ್ದರು: ಅಕಾಡೆಮಿ

Last Updated 31 ಮಾರ್ಚ್ 2022, 5:04 IST
ಅಕ್ಷರ ಗಾತ್ರ

ಲಾಸ್‌ಏಂಜಲೀಸ್:ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿಸಹನಟನ ಕೆನ್ನೆಗೆ ಬಾರಿಸಿದ್ದಅಮೆರಿಕದ ವಿಲ್‌ ಸ್ಮಿತ್‌ ಅವರಿಗೆ ಕಾರ್ಯಕ್ರಮದಿಂದ ಹೊರನಡೆಯುವಂತೆ ಸೂಚಿಸಲಾಗಿತ್ತು. ಆದರೆ, ಅಲ್ಲಿಂದ ತೆರಳಲು ಸ್ಮಿತ್‌ ನಿರಾಕರಿಸಿದ್ದರು ಎಂದು 'ಅಕಾಡೆಮಿ ಆಫ್‌ ಮೋಷನ್‌ ಪಿಕ್ಚರ್ ಆರ್ಟ್ ಮತ್ತು ಸೈನ್ಸ್‌' ತಿಳಿಸಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 'ನಾವು ನಿರೀಕ್ಷಿಸದ ಘಟನೆ ನಡೆಯಿತು' ಎಂದಿರುವ ಅಕಾಡೆಮಿ, ಸ್ಮಿತ್‌ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಿರುವುದಾಗಿ ಪ್ರಕಟಿಸಿದೆ. ಹಾಗೆಯೇ, 'ಸಮಾರಂಭದಿಂದ ಹೊರನಡೆಯುವಂತೆ ಮಿ. ಸ್ಮಿತ್ ಅವರಿಗೆ ತಿಳಿಸಿದ್ದೆವು. ಆದರೆ, ಅದನ್ನು ಅವರು ನಿರಾಕರಿಸಿದ್ದರು ಎಂದು ಸ್ಪಷ್ಟಪಡಿಸುತ್ತೇವೆ.ಪರಿಸ್ಥಿತಿಯನ್ನು ವಿಭಿನ್ನವಾಗಿ ನಿಭಾಯಿಸಬಹುದಿತ್ತು ಎನಿಸುತ್ತದೆ' ಎಂದೂ ಹೇಳಿದೆ.

ವಿಲ್‌ ಸ್ಮಿತ್‌ ಅವರು,'ಕಿಂಗ್‌ ರಿಚರ್ಡ್‌' ಚಿತ್ರದಲ್ಲಿನ ನಟನೆಗಾಗಿ ಪ್ರಸಕ್ತ ಸಾಲಿನ 'ಅತ್ಯುತ್ತಮ ನಟ' ಆಸ್ಕರ್‌ ಪ್ರಶಸ್ತಿ ಪಡೆದಿದ್ದಾರೆ. ಸಮಾರಂಭವು, ಲಾಸ್‌ಏಂಜಲೀಸ್‌ನ ಡೊಲ್ಡಿ ಸಭಾಂಗಣದಲ್ಲಿ ಭಾನುವಾರ (ಮಾ.27) ಜರುಗಿತ್ತು.

ಸಮಾರಂಭದ ವೇಳೆವೇದಿಕೆಯಲ್ಲಿದ್ದ ಕ್ರಿಸ್ ರಾಕ್ ಅವರು, ವಿಲ್‌ ಸ್ಮಿತ್‌ ಅವರ ಪತ್ನಿ ಜೇಡ ಪಿಂಕೆಟ್‌ ಸ್ಮಿತ್‌ ಕುರಿತು ಚಟಾಕಿ ಹಾರಿಸಿದ್ದರು.ಇದರಿಂದ ಸಿಟ್ಟಾದ ಸ್ಮಿತ್, ಏಕಾಏಕಿ ವೇದಿಕೆ ಏರಿ ರಾಕ್‌ ಕೆನ್ನೆಗೆ ಬಾರಿಸಿದ್ದರು.

ಬಳಿಕ ಘಟನೆ ಕುರಿತು ವಿಷಾದಿಸಿದ್ದ ಸ್ಮಿತ್, ಪಶಸ್ತಿ ಸ್ವೀಕರಿಸಲು ಹೋದಾಗ ಕ್ಷಮೆಯಾಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT