ಸೋಮವಾರ, ಜುಲೈ 4, 2022
21 °C

11ನೇ ಮಗುವಿನ ನಿರೀಕ್ಷೆಯಲ್ಲಿ ಅಮೆರಿಕ ಗಾಯಕಿ ಕೇಕೆ ವ್ಯಾಟ್...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕದ ಪಾಪ್‌ ಗಾಯಕಿ ಕೇಕೆ ವ್ಯಾಟ್ ಅವರು 11ನೇ ಮಗುವಿಗೆ ತಾಯಿಯಾಗುತ್ತಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

39ರ ಹರೆಯದ ಕೇಕೆ ವ್ಯಾಟ್‌ ಅವರು ಪತಿ ಜಕಕರಿಯಾ ಡೇವಿಡ್ ಹಾಗೂ 10 ಮಕ್ಕಳ ಜೊತೆಗೆ ಇರುವ ಫೋಟೊವನ್ನು ಹಂಚಿಕೊಂಡು 11 ನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿಕೊಂಡಿದ್ದಾರೆ.

ಕೇಕೆ ವ್ಯಾಟ್‌ ಹಂಚಿಕೊಂಡಿರುವ ಫೋಟೊದಲ್ಲಿ ಅವರ ಹತ್ತು ಮಕ್ಕಳೂ ’ನಾವು  ಅಣ್ಣ, ಅಕ್ಕ ಆಗುತ್ತಿದ್ದೇವೆ’ ಎಂದು ಸೂಚಿಸುವ ಬಿಳಿ ಬಣ್ಣದ ಟೀ ಶರ್ಟ್‌ ಧರಿಸಿಕೊಂಡಿದ್ದಾರೆ. ಈ ಪೋಟೊದಲ್ಲಿ ಕೇಕೆ ವ್ಯಾಟ್‌ ಮತ್ತು ಜಕಕರಿಯಾ ಡೇವಿಡ್ ಅವರನ್ನು ಕಾಣಬಹುದು.

ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳು ಕೇಕೆ ವ್ಯಾಟ್ಯ್‌ಗೆ ಅಭಿನಂದಿಸಿದ್ದಾರೆ.

ಕೆಲವು ದಿನಗಳ ಹಿಂದೆ ಕೇಕೆ ವ್ಯಾಟ್​ ಬೇಬಿ ಬಂಪ್​ ಫೋಟೋಶೂಟ್​ ಮಾಡಿಸಿದ್ದರು. ಆ  ಪೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಕೆಂಪು ಬಣ್ಣದ ಉಡುಗೆಯಲ್ಲಿ ಅವರು ಮಿಂಚಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು