ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Big B Birthday: 79ನೇ ವಸಂತಕ್ಕೆ ಕಾಲಿರಿಸಿದ ಅಮಿತಾಭ್

Last Updated 11 ಅಕ್ಟೋಬರ್ 2021, 8:25 IST
ಅಕ್ಷರ ಗಾತ್ರ

ಭಾರತೀಯ ಸಿನಿಮಾರಂಗದಲ್ಲಿ ದೊಡ್ಡ ಹೆಸರು ಸಂಪಾದಿಸಿರುವ ನಟಅಮಿತಾಭ್ ಬಚ್ಚನ್ ಇಂದು (ಅ.11) 79ನೇ ವರ್ಷಕ್ಕೆ ಕಾಲಿರಿಸಿದ್ದಾರೆ.

ಬಾಲಿವುಡ್‌ನ ‘ಬಿಗ್‌ ಬಿ’ ಎಂದೇ ಕರೆಸಿಕೊಳ್ಳುವ ಅಮಿತಾಭ್ ಅವರುಸಿನಿಮಾ ಕ್ಷೇತ್ರದಲ್ಲಿ 50 ಸಂವತ್ಸರಗಳನ್ನು ಪೂರೈಸಿದ್ದಾರೆ. ಅವರ ಜನ್ಮದಿನವಾದ ಇಂದು ಬಾಲಿವುಡ್‌ ಗಣ್ಯರು, ರಾಜಕೀಯ ನಾಯಕರು, ಉದ್ಯಮಿಗಳು ಸೇರಿದಂತೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.

ನಟನೆ ಮಾತ್ರವಲ್ಲದೇ ನಿರೂಪಣೆ, ನಿರ್ಮಾಣ, ನಿರ್ದೇಶನ, ಗಾಯನ ಕ್ಷೇತ್ರದಲ್ಲೂ ಹೆಜ್ಜೆಗುರುತು ಮೂಡಿಸಿರುವ ಅಮಿತಾಭ್ ಇಂದಿಗೂ ಚಿರಯುವಕನಂತೆ ಉತ್ಸಾಹಿಯಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೊವೊಂದನ್ನು ಹಾಕಿ, 80ನೇ ವರ್ಷದಲ್ಲಿ ನಡೆಯುತ್ತಿರುವೆ ಎಂದು ತಪ್ಪಾಗಿ ಬರೆದುಕೊಂಡಿದ್ದಾರೆ. ಆದರೆ ಮಗಳು ಶ್ವೇತಾ ಬಚ್ಚನ್ 80ನೇ ವರ್ಷ ಅಲ್ಲ 79ನೇ ವರ್ಷ ಎಂದು ಕಮೆಂಟ್‌ ಮಾಡಿದ್ದಾರೆ.

ತಮ್ಮ ವಿಭಿನ್ನ ನಟನೆಯ ಮೂಲಕವೇ ಭಾರತೀಯ ಸಿನಿಮಾರಂಗದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಅಮಿತಾಭ್70ರ ದಶಕದಿಂದಲೂ ‘ದೀವಾರ’, ‘ಶೋಲೆ’ಯಂತಹ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಅಮಿತಾಭ್ಸಿನಿಮಾಗಳೆಂದರೆ ಅಭಿಮಾನಿಗಳಲ್ಲಿ ಇಂದಿಗೂ ಅದೇ ಕ್ರೇಜ್‌ ಇದೆ.

ಸದ್ಯ ಅಮಿತಾಭ್ ಕೈಯಲ್ಲಿ‘ಬ್ರಹ್ಮಾಸ್ತ್ರ’ ಸಿನಿಮಾ ಸೇರಿದಂತೆ ಒಟ್ಟು 5 ಸಿನಿಮಾಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT