ಬುಧವಾರ, ಮಾರ್ಚ್ 3, 2021
19 °C

ಸುಹಾನಾ ಬಾಲಿವುಡ್‌ ಪ್ರವೇಶ ಗುಟ್ಟು ಬಿಟ್ಟುಕೊಟ್ಟ ಆಪ್ತ ಗೆಳತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಸ್ಟೂಡೆಂಟ್ ಆಫ್ ದಿ ಇಯರ್ 2’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿರುವ ಬೆಡಗಿ ಅನನ್ಯಾ ಪಾಂಡೆ ತನ್ನ ಬಾಲ್ಯಸ್ನೇಹಿತೆ ಸುಹಾನಾ ಖಾನ್‌ ಯಾವಾಗ ಬಾಲಿವುಡ್‌ಗೆ ಪ್ರವೇಶಿಸಲಿದ್ದಾಳೆ ಎಂಬ ಗುಟ್ಟನ್ನು ಹೊರಹಾಕಿದ್ದಾರೆ. 

ಸುಹಾನಾ ಬಾಲಿವುಡ್‌ ಪ್ರವೇಶದ ಬಗ್ಗೆ ಬಾಲಿವುಡ್‌ ಕುತೂಹಲದಿಂದಕಾಯುತ್ತಿದೆ. ಕಳೆದ ಕೆಲ ವರ್ಷಗಳಿಂದ ಆ ಬಗ್ಗೆ ಗಾಳಿಸುದ್ದಿಗಳು ಹರಿದಾಡುತ್ತಲೇ ಇವೆ. ಇತ್ತೀಚೆಗೆ ಲಂಡನ್‌ನಲ್ಲಿ ಪದವಿ ಮುಗಿಸಿ ಬಂದಿರುವ ಸುಹಾನಾ, ಸದ್ಯ ನ್ಯೂಯಾರ್ಕ್‌ನಲ್ಲಿ ಫಿಲ್ಮ್‌ ಸ್ಕೂಲ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. 

ಅನನ್ಯಾ ಪಾಂಡೆ ಈಗಾಗಲೇ ಬಾಲಿವುಡ್‌ಗೆ ಕಾಲಿಟ್ಟಿದ್ದು, ತಮ್ಮ ಸ್ನೇಹಿತೆ ಪದಾರ್ಪಣೆ ಮಾಡುವುದನ್ನು ಕಾಯುತ್ತಿದ್ದಾರಂತೆ. ತನ್ನ ಸ್ನೇಹಿತೆಯ ಅಭಿನಯ ಕೌಶಲವನ್ನು ಮೆಚ್ಚಿರುವ ಅವರು, ಅವರು ಯಾವಾಗ ನಟನೆಗೆ ಬರಬಹುದು ಎಂಬ ಗುಟ್ಟನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. 

‘ಆಕೆಗೆ ಇಷ್ಟವಾದಾಗ ನಟನೆಗೆ ಬರಬಹುದು. ಈಗ ಆಕೆ ತರಬೇತಿ ಪಡೆಯುತ್ತಿದ್ದಾಳೆ. ಆಕೆ ಶಿಕ್ಷಣ ಮುಗಿಸಿ ನಂತರ ಬಾಲಿವುಡ್‌ಗೆ ಬರಬಹುದು ಅಥವಾ ಆಕೆಗೆ ಉತ್ತಮ ಅವಕಾಶಗಳು ಬಂದಾಗ ಅದಕ್ಕೂ ಮೊದಲು ಆಕೆ ಒಪ್ಪಿಕೊಳ್ಳಬಹುದು. ಆಕೆ ಪ್ರತಿಭಾವಂತೆ’ ಎಂದು ಹೇಳಿದ್ದಾರೆ. 

ಸುಹಾನಾ ಜೊತೆಗಿನ ತನ್ನ ಬಾಂಧವ್ಯದ ಬಗ್ಗೆ ಮಾತನಾಡಿರುವ ಅನನ್ಯಾ, ‘ಶಾಲೆಯಲ್ಲಿ ನಾನು ಮತ್ತು ಸುಹಾನಾ ಅನೇಕ ನಾಟಕಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಆಕೆಯಿಂದ ನಟನೆ ಬಗ್ಗೆ ನಾನು ತುಂಬಾ ಕಲಿತುಕೊಂಡಿದ್ದೇನೆ.  ಸಲಹೆಗಳನ್ನು ಪಡೆದಿದ್ದೇನೆ’ ಎಂದು ಹೇಳಿದ್ದಾರೆ. 

ಇನ್ನೊಂದೆಡೆ ಸುಹಾನಾಳ ಸಹೋದರ ಆರ್ಯನ್‌ ಖಾನ್‌, ಡಿಸ್ನಿಯ ಮುಂದಿನ ಚಿತ್ರ ‘ಲಯನ್‌ ಕಿಂಗ್‌’ ಚಿತ್ರದ ಹಿಂದಿ ಆವೃತ್ತಿಗೆ ಅಪ್ಪ ಶಾರುಕ್‌ ಖಾನ್‌ ಜೊತೆ ಧ್ವನಿ ನೀಡಿದ್ದಾರೆ. ಅವರು ಸಿಂಬ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. 

ಅನನ್ಯಾ ಪಾಂಡೆ ಅಭಿನಯದ ಮುಂದಿನ ಚಿತ್ರ ‘ಪತಿ, ಪತ್ನಿ ಔರ್‌ ವೋ’ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಕಾರ್ತಿಕ್‌ ಆರ್ಯನ್‌
ಜೊತೆ ನಟಿಸುತ್ತಿದ್ದಾರೆ.

ಈ ಚಿತ್ರವನ್ನು ಮುದಾಸ್ಸೀರ್‌ ಅಜೀಜ್‌ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ 2020ರ ಜನವರಿ 10ರಂದು ಬಿಡುಗಡೆಯಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು