ಭಾನುವಾರ, ಜುಲೈ 25, 2021
25 °C

‘ಪುಷ್ಪ’ದಲ್ಲಿ ಅನನ್ಯಾ ಪಾಂಡೆ ನೃತ್ಯ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನನ್ಯಾ ಪಾಂಡೆ

ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ತೆಲುಗಿನ ‘ಪುಷ್ಪ’ ಪ್ಯಾನ್‌ ಇಂಡಿಯಾ ಚಿತ್ರ. ಕನ್ನಡದಲ್ಲೂ ಈ ಸಿನಿಮಾ ಡಬ್ಬಿಂಗ್‌ ಆಗಿ ಬಿಡುಗಡೆಯಾಗಲಿದೆಯಂತೆ. ಇದಕ್ಕೆ ‘ರಂಗಸ್ಥಳಂ’ ಚಿತ್ರದ ಖ್ಯಾತಿಯ ಸುಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಮೈತ್ರಿ ಮೂವಿ ಮೇಕರ್ಸ್‌ನಡಿ ನಿರ್ಮಾಣವಾಗುತ್ತಿರುವ ಇದರಲ್ಲಿ ನಟರಾದ ಪ್ರಕಾಶ್‌ ರಾಜ್ ಮತ್ತು ಜಗಪತಿ ಬಾಬು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

‘ಪುಷ್ಪ’ದಲ್ಲಿ ವಿಶೇಷ ಸಾಂಗ್‌ವೊಂದು ಇದೆಯಂತೆ. ಇದರಲ್ಲಿ ಪ್ರಸಿದ್ಧ ನಟಿಯರನ್ನು ಕುಣಿಸಬೇಕೆಂಬುದು ಸುಕುಮಾರ್ ಅವರ ಆಸೆ. ಅದಕ್ಕಾಗಿಯೇ ಅವರು ನಟೀಮಣಿಯರ ಹುಡುಕಾಟದಲ್ಲಿ ತೊಡಗಿದ್ದಾರೆ. ನಟಿ ದಿಶಾ ಪಟಾನಿ ಈ ಹಾಡಿಗೆ ಸೊಂಟ ಬಳುಕಿಸಲಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ, ಈಗ ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಅವರನ್ನು ಕರೆತರಲು ಚಿತ್ರತಂಡ ನಿರ್ಧರಿಸಿದೆಯಂತೆ. ಈ ನಿಟ್ಟಿನಲ್ಲಿ ಆಕೆಯೊಟ್ಟಿಗೆ ಮಾತುಕತೆಯಲ್ಲಿ ತೊಡಗಿದೆ.

‘ಆರ್ಯ’ ಮತ್ತು ‘ಆರ್ಯ 2’ ಸಿನಿಮಾಗಳ ಬಳಿಕ ಸುಕುಮಾರ್‌ ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ಮೂರನೇ ಚಿತ್ರ. ರಕ್ತಚಂದನದ ಕಳ್ಳಸಾಗಣೆಯ ಸುತ್ತ ಇದರ ಚಿತ್ರಕಥೆ ಹೆಣೆಯಲಾಗಿದೆ. ಲಾಕ್‌ಡೌನ್‌ಗೂ ಮೊದಲೇ ಇದರ ಒಂದು ಹಂತದ ಶೂಟಿಂಗ್‌ ಪೂರ್ಣಗೊಂಡಿದೆ. ಮುಂದಿನ ತಿಂಗಳು ಅಥವಾ ಸೆಪ್ಟೆಂಬರ್‌ನಲ್ಲಿ ಉಳಿದ ಭಾಗದ ಶೂಟಿಂಗ್‌ ಆರಂಭಿಸುವ ಇರಾದೆ ಚಿತ್ರತಂಡದ್ದು.

ಅನನ್ಯಾ ನಟ ಚಂಕಿ ಪಾಂಡೆ ಅವರ ಪುತ್ರಿ. ಆಕೆ ಕಳೆದ ವರ್ಷ ತೆರೆಕಂಡ ಹಿಂದಿಯ ‘ಸ್ಟೂಡೆಂಟ್ ಆಫ್ ದಿ ಇಯರ್ 2’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಅದೇ ವರ್ಷ ತೆರೆಕಂಡ ಕಾಮಿಡಿ ಚಿತ್ರ ‘ಪತಿ ಪತ್ನಿ ಔರ್ ವೋಹ್’ನಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು