ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಜನಪ್ರಿಯತೆಯಿಂದಾಗಿ ಅನನ್ಯಾ ಬಟ್ಟೆ ಬ್ರ್ಯಾಂಡ್‌ಗೆ ರಾಯಭಾರಿ

ಬಟ್ಟೆ ಬ್ರ್ಯಾಂಡ್‌ಗೆ ಅನನ್ಯಾ ಪಾಂಡೆ ರಾಯಭಾರಿ

Published:
Updated:
Prajavani

ಬಾಲಿವುಡ್‌ಗೆ ‘ಸ್ಟೂಡೆಂಟ್‌ 2’ ರೀತಿ ಅಡಿಯಿಟ್ಟ ಕೆಲವೇ ದಿನಗಳಲ್ಲಿ ಅನನ್ಯಾ ಪಾಂಡೆ ಯಶಸ್ಸಿನ ಕುದುರೆ ಏರಿದ್ದಾರೆ. ತಮ್ಮ ಚೊಚ್ಚಲ ಚಿತ್ರ ‘ಸ್ಟೂಡೆಂಟ್ ಆಫ್‌ ದಿ ಇಯರ್–2’ ಹಿಟ್ ಆಗುತ್ತಿದ್ದಂತೆ ಅವರನ್ನು ತಾರಾ ಪ್ರಚಾರಕರನ್ನಾಗಿ ಬಳಸಿಕೊಳ್ಳಲು ಉತ್ಪನ್ನ ತಯಾರಕ ಕಂಪನಿಗಳು ಮುಗಿಬಿದ್ದಿವೆ. ಅನನ್ಯಾ ಈಗ ಫ್ಯಾಷನ್ ಬ್ರಾಂಡ್ ಒಂದಕ್ಕೆ ರಾಯಭಾರಿಯಾಗಿ ಸಹಿ ಹಾಕಿದ್ದಾರೆ. 

ಸಿನಿಮಾದಲ್ಲಿ ಮನೋಜ್ಞ ಅಭಿನಯದ ಮೂಲಕ ಯುವಕರ ಹೃದಯ ಕದ್ದಿರುವ ಅನನ್ಯಾಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂಬಾಲಕರ ದೊಡ್ಡ ಪಡೆಯೇ ಸಾಲುಗಟ್ಟಿದೆ. ಅನನ್ಯಾ ಅವರ ಸ್ಟೈಲ್, ಅವರ ಫ್ಯಾಷನ್ ಸೆನ್ಸ್, ಬಟ್ಟೆಗಳ ವಿನ್ಯಾಸ, ಅವರು ತಮ್ಮ ಬಟ್ಟೆಗಳನ್ನು ಆಯ್ದುಕೊಳ್ಳುವಲ್ಲಿ ತೋರುವ ಪ್ರಬುದ್ಧತೆ, ದೃಢವಿಶ್ವಾಸವೇ ಅವರನ್ನು ಆಯ್ಕೆ ಮಾಡಲು ಕಾರಣ ಎನ್ನುತ್ತಾರೆ ಕಂಪನಿಯ ಮುಖ್ಯಸ್ಥರು. 

ಪುನೀತ್ ಮಲ್ಹೋತ್ರಾ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಟೈಗರ್‌ ಶ್ರಾಫ್ ಹಾಗೂ ತಾರಾ ಸುತಾರಿಯಾ ಅವರು ಮುಖ್ಯಭೂಮಿಕೆಯಲ್ಲಿದ್ದಾರೆ. ಅನನ್ಯಾ ತಮ್ಮ ಮುಂದಿನ ಚಿತ್ರದಲ್ಲಿ ಭೂಮಿ ಫಡ್ನೇಕರ್ ಹಾಗೂ ಕಾರ್ತಿಕ್ ಆರ್ಯನ್ ಅವರ ಜೊತೆ ನಟಿಸುತ್ತಿದ್ದಾರೆ. 

Post Comments (+)