ಸೋಮವಾರ, ನವೆಂಬರ್ 18, 2019
26 °C

ಫರ‍್ಹಾ ಚಿತ್ರದಲ್ಲಿ ಅನನ್ಯಾ

Published:
Updated:
ನಟಿ ಅನನ್ಯಾ ಪಾಂಡೆ

ಬಾಲಿವುಡ್‌ನಲ್ಲಿ ನಟಿ ಅನನ್ಯಾ ಪಾಂಡೆ ನಟಿಸಿದ್ದು ಒಂದೇ ಚಿತ್ರವಾದರೂ, ಸಾಲು ಸಾಲು ಚಿತ್ರಗಳ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಅವರು ನಟಿಸುತ್ತಿರುವ ‘ಪತಿ, ಪತ್ನಿ ಔಟ್‌ ವೋ’ ಚಿತ್ರದ ಟ್ರೇಲರ್‌ ಈಗಾಗಲೇ ಬಿಡುಗಡೆಗೊಂಡಿದ್ದು, ಮಕ್ಬೂಲ್‌ ಖಾನ್‌ ಅವರ ‘ಖಾಲಿ ಪೀಲಿ’ ಚಿತ್ರದಲ್ಲೂ ನಾಯಕಿಯಾಗಿ ನಟಿಸಲಿದ್ದಾರೆ. ಈಗ ಮತ್ತೊಂದು ಖ್ಯಾತ ನಿರ್ದೇಶಕಿಯೊಬ್ಬರ ಚಿತ್ರದಲ್ಲಿ ಅವರು ನಾಯಕಿಯಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಫರ‍್ಹಾ ಖಾನ್‌ ಅವರ ಮುಂದಿನ ಚಿತ್ರದಲ್ಲಿ ನಟಿಸುವುದರ ಬಗ್ಗೆ ಅನನ್ಯಾ ಪಾಂಡೆ ಒಂದು ದೊಡ್ಡ ಸುಳಿವು ನೀಡಿದ್ದಾರೆ. ಕಳೆದ ಫೆಬ್ರುವರಿಯಲ್ಲಿ ರೋಹಿತ್ ಶೆಟ್ಟಿ ಜೊತೆ ಮಾಡುತ್ತಿರುವ ಸಿನಿಮಾದ ಬಗ್ಗೆ ಫರ್‍ಹಾ ಮಾತನಾಡಿದ್ದರು. ಇದು 1982ರಲ್ಲಿ ಬಿಡುಗಡೆಯಾದ ‘ಸತ್ತೇ ಪೆ ಸತ್ತಾ’ ಚಿತ್ರದ ರಿಮೇಕ್‌ ಚಿತ್ರ ಎನ್ನಲಾಗಿದೆ. ಆ ಮೂಲ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌ ಹಾಗೂ ಹೇಮಾಮಾಲಿನಿ ನಟಿಸಿದ್ದರು. ಈಗ ಈ ಚಿತ್ರಕ್ಕೆ ಅನನ್ಯಾ ಪಾಂಡೆ ನಟಿಸಲಿದ್ದಾರೆ  ಎನ್ನಲಾಗಿದೆ. ಆದರೆ ಈ ಸಿನಿಮಾ ಕುರಿತಾಗಿ ಹಬ್ಬಿರುವ ಯಾವ ಸುದ್ದಿಯನ್ನೂ ಫರ್‍ಹಾ ಒಪ್ಪಿಕೊಂಡಿಲ್ಲ, ಹಾಗೇ ನಿರಾಕರಿಸಿಯೂ ಇಲ್ಲ.

‘ಈ ಹೊಸ ಚಿತ್ರವನ್ನು ರೋಹಿತ್‌ ಶೆಟ್ಟಿ ನಿರ್ಮಾಣ ಮಾಡಲಿದ್ದಾರೆ. ನಾನು ನಿರ್ದೇಶಿಸಲಿದ್ದೇನೆ. ಎಲ್ಲಾ ಸರಿಹೋದ ನಂತರ ಘೋಷಣೆ ಮಾಡುತ್ತೇನೆ’ ಎಂದು ಹೇಳಿದ್ದಾರೆ.

‘ಪತಿ, ಪತ್ನಿ ಔಟ್‌ ವೋ’ಸೆಟ್‌ಗೆ ಈಚೆಗೆ ಹೋಗಿದ್ದ ಫರ್‍ಹಾ ಖಾನ್‌ ಅಲ್ಲಿ ತೆಗೆದುಕೊಂಡಿದ್ದ ಫೋಟೊವನ್ನು ಹಂಚಿಕೊಂಡಿದ್ದರು. ಫೋಟೊ ಕೆಳಗೆ ‘ಈಗ ಇವರ ಕಾಲ, ಮುಂದೆ ನಾನು ಇವರನ್ನು ಆಟ ಆಡಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಅದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ಅನನ್ಯಾ ಪಾಂಡೆ, ‘ಲವ್‌ ಯು, ನನ್ನ ಮುಂದಿನ ನಿರ್ದೇಶಕಿ’ ಎಂದು ಬರೆದಿದ್ದಾರೆ. ಹಾಗಾಗಿ ಫರ್‍ಹಾ ಮುಂದಿನ ಚಿತ್ರದಲ್ಲಿ ಭೂಮಿ ಪಡ್ನೇಕರ್‌, ಕಾರ್ತಿಕ್‌ ಆರ್ಯನ್‌ ಅಥವಾ ಅನನ್ಯಾ ಪಾಂಡೆ ನಟಿಸಿಬಹುದು ಎಂದು ಅನುಮಾನ ವ್ಯಕ್ತವಾಗಿದೆ.

 

ಪ್ರತಿಕ್ರಿಯಿಸಿ (+)