ಕಾರ್ತಿಕ್ ಒಳ್ಳೆಯ ಸ್ನೇಹಿತನಷ್ಟೇ!

ಬುಧವಾರ, ಜೂನ್ 26, 2019
24 °C

ಕಾರ್ತಿಕ್ ಒಳ್ಳೆಯ ಸ್ನೇಹಿತನಷ್ಟೇ!

Published:
Updated:
Prajavani

ಬಾಲಿವುಡ್‌ನ ಪುಟ್ಟ ಸ್ಟಾರ್‌ಗಳಾದ ಕಾರ್ತಿಕ್ ಆರ್ಯನ್ ಮತ್ತು ಅನನ್ಯಾ ಪಾಂಡೆ ಇತ್ತೀಚೆಗೆ ಮಾಧ್ಯಮಗಳ ಗಮನ ಸೆಳೆಯುತ್ತಿದ್ದಾರೆ. ಇಬ್ಬರೂ ಜತೆಯಾಗಿ ತಿರುಗಾಡುತ್ತಿದ್ದು, ಪರಸ್ಪರ ಪ್ರೀತಿಯಲ್ಲಿ ಬಿದ್ದಿರಬಹುದು ಎಂಬ ಗಾಸಿಪ್ ಮಾತುಗಳೂ ಬರುತ್ತಿವೆ. 

‘ಸ್ಟೂಡೆಂಟ್ ಆಫ್ ಇಯರ್ 2’ನ ಯಶಸ್ಸಿನಿಂದ ಬೀಗುತ್ತಿರುವ ಅನನ್ಯಾ ಸದ್ಯಕ್ಕೆ ಬಟ್ಟೆಯ ಬ್ರ್ಯಾಂಡ್‌ವೊಂದಕ್ಕೆ ರೂಪದರ್ಶಿಯೂ ಆಗಿದ್ದಾಳೆ. ಚಂಕಿ ಪಾಂಡೆಯ ಮಗಳು ಎಂಬ ಸುರಕ್ಷಾ ಕವಚ ತೊರೆದು  ಬಾಲಿವುಡ್‌ನಲ್ಲಿ ಸ್ವಂತ ಅಸ್ತಿತ್ವ ಕಂಡುಕೊಳ್ಳುವಲ್ಲಿ ಶ್ರಮ ಪಡುತ್ತಿರುವ ಅನನ್ಯಾಳಿಗೆ ಕಾರ್ತಿಕ್ ಮೇಲೆ ಮನಸಿದೆಯೇ ಎಂದು ಪ್ರಶ್ನಿಸಿದರೆ, ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸುತ್ತಾಳೆ.

‘ಕಾರ್ತಿಕ್ ನನ್ನ ಒಳ್ಳೆಯ ಸ್ನೇಹಿತ. ಇಬ್ಬರೂ ಜತೆಯಾಗಿ ಸಿನಿಮಾ ಮಾಡುತ್ತಿದ್ದೇವೆ (ಪತಿ, ಪತ್ನಿ ಔರ್ ವೋ) ನಾವಿಬ್ಬರೂ ಆರಾಮದಾಯಕವಾಗಿದ್ದೇವೆ. ಕಾರ್ತಿಕ್ ಜತೆ ಸಮಯ ಕಳೆಯುವುದು ನನಗೆ ಬಲುಪ್ರಿಯವಾದ ಸಂಗತಿ’ ಎಂದಿರುವ ಅನನ್ಯಾ, ಸಿನಿಮಾಗಳಲ್ಲಿ ಜತೆಯಾಗಿ ಅಭಿನಯಿಸುವಾಗ ಕಾರ್ತಿಕ್ ಬರೀ ತನ್ನ ಸಂಭಾಷಣೆಯ ಬಗ್ಗೆಯಷ್ಟೇ ಅಲ್ಲ, ಆ ದೃಶ್ಯವನ್ನು ಮತ್ತಷ್ಟು ಚೆನ್ನಾಗಿ ಹೇಗೆ ಅಭಿನಯಿಸಬಹುದು ಎಂಬ ಬಗ್ಗೆಯೂ ಗಮನಿಸುತ್ತಾನೆ. ಒಟ್ಟಾರೆ ಕಾರ್ತಿಕ್ ನನ್ನೆಲ್ಲಾ ವಿಷಯಗಳಿಗೂ ಸಹಾಯ ಮಾಡುತ್ತಾನೆ’ ಎಂಬ ವಿವರಣೆ ನೀಡುತ್ತಾಳೆ. 

ಸದ್ಯಕ್ಕೆ ಪ್ರಥಮ ಸಿನಿಮಾದ ಯಶಸ್ಸಿನಿಂದ ಆತ್ಮವಿಶ್ವಾಸ ಪಡೆದುಕೊಂಡಿರುವ ಅನನ್ಯಾ ಕೈಯಲ್ಲಿ ‘ಪತಿ, ಪತ್ನಿ ಔರ್ ವೋ’ ಸಿನಿಮಾವಿದೆ. ಇದು ಈ ವರ್ಷದ ಅಂತ್ಯದ ವೇಳೆಗೆ ತೆರೆ ಕಾಣುವ ಸೂಚನೆಯಿದೆ. 

ತನ್ನ ಮತ್ತು ಅನನ್ಯಾ ನಡುವಿನ ಗೆಳೆತನ ಬಗ್ಗೆ ಕಾರ್ತಿಕ್ ಮಾತ್ರ ಇದುವರೆಗೂ ಗುಟ್ಟು ಬಿಟ್ಟುಕೊಟ್ಟಿಲ್ಲ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !