ಗುರುವಾರ , ಆಗಸ್ಟ್ 22, 2019
27 °C

ಅಂದವಾದ ಟೀಸರ್‌ ಬಂತು

Published:
Updated:
Prajavani

‘ಅಂದವಾದ’ ಚಿತ್ರವು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಅದಕ್ಕೆ ಪೂರ್ವಭಾವಿಯಾಗಿ ಚಿತ್ರದ ಟೀಸರ್‌ ಬಿಡುಗಡೆ ಮಾಡಲಾಗಿದೆ. ಅಂದಹಾಗೆ, ಟೀಸರ್‌ ಬಿಡುಗಡೆ ಆಗಿದ್ದು ‘ಕುರುಕ್ಷೇತ್ರ’ ಸಿನಿಮಾ ಪ್ರದರ್ಶನದ ನಡುವೆ.

‘ಕುರುಕ್ಷೇತ್ರ ಪ್ರದರ್ಶನದ ನಡುವೆ, ಇಂಟರ್‌ವಲ್‌ ಸಮಯದಲ್ಲಿ ಅಂದವಾದ ಚಿತ್ರದ ಟೀಸರ್‌ಅನ್ನು ಬೆಂಗಳೂರಿನ ಮಾಲ್‌ಗಳಲ್ಲಿ ಬಿಡುಗಡೆ ಮಾಡಲಾಯಿತು’ ಎಂದು ತಿಳಿಸಿದೆ ಚಿತ್ರತಂಡ.

ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಹಾಗೂ ಹೃದಯಶಿವ ‘ಅಂದವಾದ’ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಸಕಲೇಶಪುರ, ಬಿಸಿಲೆ ಘಾಟ್, ಚಿಕ್ಕಮಗಳೂರು ಹಾಗೂ ಅಂಡಮಾನ್‌ನಲ್ಲಿ ಇದರ ಚಿತ್ರೀಕರಣ ನಡೆದಿದೆ. 

ಮುಂಗಾರಿನ ಅವಧಿಯಲ್ಲಿ ನಡೆಯುವ ಪ್ರೇಮಕಥೆ ಈ ಚಿತ್ರದ ಆತ್ಮ. ‘ನಗ್ತಾ ನಗ್ತಾನೇ ಅಳಿಸುವ ಕಥೆ ಇದರಲ್ಲಿದೆ’ ಎಂಬುದು ಚಿತ್ರದ ಬಗ್ಗೆ ಸಿನಿತಂಡ ನೀಡಿರುವ ವಿವರಣೆ. ‘ಎಲ್ಲರೂ ತಮ್ಮ ಹುಡುಗಿಯರಿಗೆ ತಾಜಮಹಲ್ ತೋರಿಸ್ಬೇಕು ಅನ್ಕೋಳ್ತಾರೆ. ಆದ್ರೆ, ತಾಜ್‍ಮಹಲ್‍ಗೆ ನಮ್ ಹುಡ್ಗೀನ ತೋರಿಸ್ಬೇಕು ಅನ್ಕೊಂಡಿದ್ದೀನಿ’ ಎಂಬುದು ಟೀಸರ್‌ನಲ್ಲಿ ಬರುವ ಒಂದು ಡೈಲಾಗ್.

Post Comments (+)