ಆ್ಯಂಡ್ರಿಯಾ ರಾಜಕುಮಾರಿ

ಶನಿವಾರ, ಏಪ್ರಿಲ್ 20, 2019
27 °C

ಆ್ಯಂಡ್ರಿಯಾ ರಾಜಕುಮಾರಿ

Published:
Updated:

ತಮಿಳು ಚಿತ್ರರಂಗದ ಲಂಬೂ ನಟಿ ಆ್ಯಂಡ್ರಿಯಾ ಜೆರೆಮಿಯಾಗೆ ’ಮಾಲಿಗೈ’ ಚಿತ್ರ ಅದೃಷ್ಟ ಹೊತ್ತುತಂದಿದೆ. ದಿಲ್‌ ಸತ್ಯ ನಿರ್ದೇಶನದಲ್ಲಿ ಸೆಟ್ಟೇರಿರುವ ಈ ಚಿತ್ರದಲ್ಲಿ ಆ್ಯಂಡ್ರಿಯಾ ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿರುವುದು ಈಗಾಗಲೇ ಎಲ್ಲರಿಗೂ ತಿಳಿದಿದೆ. 

ಇದೀಗ ಬಂದಿರುವ ಹೊಸ ಸುದ್ದಿ ಏನೆಂದರೆ, ಆ್ಯಂಡ್ರಿಯಾ ತೆಕ್ಕೆಗೆ ಮತ್ತೊಂದು ಪಾತ್ರವೂ ತಾನಾಗೇ ಬಂದು ಬಿದ್ದಿದೆ. ಅದು ರಾಜಕುಮಾರಿಯ ಪಾತ್ರ. ಆ್ಯಕ್ಷನ್‌, ಫ್ಯಾಂಟಸಿ ಮತ್ತು ಹಾರರ್‌ ಚಿತ್ರವಾಗಿ ’ಮಾಲಿಗೈ‘ ಮೂಡಿಬರುತ್ತಿದೆ. ಇದರಲ್ಲಿ ಫ್ಯಾಂಟಸಿ ಕಥಾಭಾಗದಲ್ಲಿ ಆ್ಯಂಡ್ರಿಯಾ ರಾಜಕುಮಾರಿಯಾಗಿ ಮಿಂಚಲಿದ್ದಾರೆ. 400 ವರ್ಷಗಳಷ್ಟು ಹಳೆಯ ಕತೆಯನ್ನು ಈ ಭಾಗದಲ್ಲಿ ಹೇಳಲಾಗುತ್ತದೆ. ತನ್ನ ಪೂರ್ವಜನ್ಮದ ಕತೆಯನ್ನು ರಾಜಕುಮಾರಿ ತಿಳಿದುಕೊಳ್ಳುವ ಸನ್ನಿವೇಶಗಳು ಬರುತ್ತವೆ ಎಂದು ದಿಲ್ ರಾಜು ಹೇಳಿದ್ದಾರೆ.

ಈ ಚಿತ್ರದ ಮತ್ತೊಂದು ಆಕರ್ಷಣೆ ಎಂದರೆ, ಕನ್ನಡದ ಕಿರುತೆರೆ ಮತ್ತು ಹಿರಿತೆರೆಯ ನಟ ಕಾರ್ತಿಕ್ ಜಯರಾಮ್‌ ಯಾನೆ ಜೆಕೆ ಈ ಚಿತ್ರದ ನಾಯಕನಟ. ಅಶುತೋಷ್‌ ರಾಣಾ, ಕೆ.ಎಸ್.ರವಿಕುಮಾರ್, ಮನೋ ಬಲ, ಜಂಗಿರಿ ಮಧುಮಿತ ಮತ್ತು ಹಾಸ್ಯ ನಟ ಅಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !