ಆನೇಕಲ್: ಪಟ್ಟಣದ ದೇವರಕೊಂಡಪ್ಪ ವೃತ್ತದಲ್ಲಿ ಪದ್ಮಭೂಷಣ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದಿಂದ ಡಾ.ರಾಜ್ಕುಮಾರ್ ಅವರ ಜಯಂತಿ ಆಚರಿಸಲಾಯಿತು.

ಅಣ್ಣಾವ್ರು ಪಾತ್ರಗಳನ್ನು ಅಭಿನಯಿಸುತ್ತಿರಲಿಲ್ಲ. ಅವುಗಳಲ್ಲಿ ಜೀವಿಸುತ್ತಿದ್ದರು. ಅವರು ಮಾಡಿದ ಸಿನಿಮಾ ಹಾಗೂ ನಿಜ ಜೀವನದ ಆದರ್ಶ, ನಡೆ, ನುಡಿ ಸಮಾಜಕ್ಕೆ ದಾರಿ ದೀಪ. ಬಂಗಾರದ ಮನುಷ್ಯ, ಭಕ್ತ ಕುಂಬಾರ, ಗಂಧದಗುಡಿ, ಮಣ್ಣಿನ ಮಗ, ಜೀವನ ಚೈತ್ರ, ಶಬ್ಧವೇದಿ ಸೇರಿದಂತೆ ಹಲವು ಚಲನಚಿತ್ರಗಳು ಜನರ ಬದುಕನ್ನೇ ಬದಲಾಯಿಸಿವ ಚಲನಚಿತ್ರಗಳಾಗಿದ್ದವು ಎಂದು ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಗೌರವ ಅಧ್ಯಕ್ಷ ಡಾ.ಸಿ.ಬಿ.ಮೋಹನ್ ಹೇಳಿದರು.

ಆನೇಕಲ್ನೊಂದಿಗೆ ಡಾ.ರಾಜ್ಕುಮಾರ್ ಅವರಿಗೆ ನಿಕಟ ಸಂಬಂಧವಿದೆ. ಅವರ ಮೊದಲ ಚಲನಚಿತ್ರಕ್ಕೆ ಹಾಡು ಬರೆದಿದ್ದು ಆನೇಕಲ್ನ ಲಾವಣಿ ನಂಜಪ್ಪನವರು, ಹಾಗಾಗಿ ಆನೇಕಲ್ ಮೇಲೆ ಡಾ.ರಾಜ್ ಅವರಿಗೆ ವಿಶೇಷ ಅಭಿಮಾನವಿತ್ತು ಎಂದು ಅಭಿಮಾನಿಗಳ ಸಂಘದ ಅಧ್ಯಕ್ಷ ಟಿ.ವಿ.ಪ್ರಸಾದ್ ಸ್ಮರಿಸಿದರು.

ಕನ್ನಡ ನಾಡು-ನುಡಿ, ನೆಲ-ಜಲ ವಿಚಾರದಲ್ಲಿ ಸದಾ ಮುಂಚೂಣಿಯಲ್ಲಿದ್ದ ಅವರು ಗೋಕಾಕ್ ಚಳವಳಿಗೆ ಧುಮಿಕಿದ ಮೇಲೆ ಹೋರಾಟ ಮತ್ತಷ್ಟು ತೀವ್ರ ಪಡೆಯಿತು. ನೇತ್ರದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದರು ಎಂದರು.

ದೇವರಕೊಂಡಪ್ಪ ವೃತ್ತದಲ್ಲಿರುವ ಡಾ.ರಾಜ್ಕುಮಾರ್ ಬಸ್ ತಂಗುದಾಣವು ಶಿಥಿಲಾವಸ್ಥೆಯಲ್ಲಿದೆ. ಈ ಬಗ್ಗೆ ವಿಶೇಷ ಅನುದಾನದಡಿಯಲ್ಲಿ ಸುಸಜ್ಜಿತ ಮತ್ತು ಸುಂದರ ನಿಲ್ದಾಣವನ್ನು ನವೀಕರಿಸಲಾಗುವುದು. ಬಸ್ ನಿಲ್ದಾಣದಲ್ಲಿ ಡಾ.ರಾಜ್ ಅವರ ಆಕರ್ಷಕ ಚಿತ್ರಪಟಗಳನ್ನು ಅಳವಡಿಸಲಾಗುವುದು ಎಂದು ಪುರಸಭಾ ಮಾಜಿ ಅಧ್ಯಕ್ಷ ಎನ್.ಎಸ್.ಪದ್ಮನಾಭ ಹೇಳಿದರು.

ಲೇಖಕ ಜಗನ್ನಾಥರಾವ್ ಬಹುಳೆ, ಪುರಸಭೆ ಮಾಜಿ ಸದಸ್ಯ ರಾಜೇಂದ್ರ ಪ್ರಸಾದ್, ಶೇಖರ್, ನಾಗೇಂದ್ರ, ಕುಮಾರ್, ಬಾಬು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-15-1003558878

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.