ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಲ್‌ ಹೇಳಿದ ಯಶಸ್ಸಿನ ಸೂತ್ರ

Last Updated 21 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಬಾಲಿವುಡ್‌ನ ನಟ ಅನಿಲ್ ಕಪೂರ್ ಸಿನಿಮಾದ ಯಶಸ್ಸನ್ನು ಪರಿಭಾವಿಸುವ ರೀತಿ ಹೇಗಿರುತ್ತದೆ ಗೊತ್ತೇ? ಹಣ ಗಳಿಕೆಯೇ, ಗೆಲುವೇ ಅಥವಾ ಚಿತ್ರ ಎಷ್ಟು ಪ್ರೇಕ್ಷಕರನ್ನು ತಲುಪಿದೆ ಎಂಬುದು ಅವರಿಗೆ ಮುಖ್ಯವೇ? ಅನಿಲ್‌ ಪ್ರಕಾರ,ತಾವು ನಟಿಸಿದ ಚಿತ್ರ ಕಮರ್ಷಿಯಲಿ ಗೆದ್ದರಷ್ಟೇ ಗೆಲುವು ಅಂತೆ.

‘ಟೋಟಲ್‌ ಧಮಾಲ್‌’ ಬಾಕ್ಸಾಫೀಸ್‌ನಲ್ಲಿ ಅತ್ಯುತ್ತಮ ಗಳಿಕೆ ದಾಖಲಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅನಿಲ್‌, ‘ಯಾವುದೇ ಚಿತ್ರ ಎಲ್ಲಾ ರೀತಿಯಿಂದಲೂ ಗೆಲ್ಲಬೇಕಾದ್ದು ಅವಶ್ಯ. ಆದರೆ ಕಮರ್ಷಿಯಲಿ ಗೆದ್ದಾಗ ಮಾತ್ರ ಅದು ಹೆಚ್ಚು ಜನರನ್ನು ತಲುಪಿದೆ ಎಂದು ಅರ್ಥ. ನನಗೆ ಈ ಅಂಶ ಹೆಚ್ಚು ಮುಖ್ಯ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

‘ಏಕ್‌ ಲಡ್‌ಕಿ ಕೊ ದೇಖಾ ತೊ ಐಸಾ ಲಗಾ’ ಸಿನಿಮಾದ ಮೂಲಕ ಹೊಸ ವರ್ಷದಲ್ಲಿ ತಮ್ಮ ಖಾತೆ ತೆರೆದಿರುವ ಅನಿಲ್‌ ಅವರ, ‘ಟೋಟಲ್‌ ಧಮಾಲ್‌’ ನಮ್ಮ ದೇಶವೊಂದರಲ್ಲೇ 150 ಕೋಟಿ ರೂಪಾಯಿ ದಾಖಲೆ ಗಳಿಕೆ ಕಂಡಿದೆ. ಇದು ಅನಿಲ್‌ಗೆ ಭಾರಿ ಖುಷಿ ತಂದಿದೆ.

ಕೈಗೆ ಸಿಕ್ಕಿದ ಆಫರ್‌ಗಳಿಗೆಲ್ಲ ಕಾಲ್‌ಶೀಟ್‌ ನೀಡುವವರಲ್ಲ ಅನಿಲ್‌. ಚಿತ್ರಕತೆ ತಮ್ಮ ಮನಸ್ಸಿಗೆ ತಟ್ಟಿದರೆ ಮಾತ್ರ ಮುಂದಿನ ಮಾತುಕತೆ. ಕತೆ ತನಗೇ ಇಷ್ಟವಾಗದಿದ್ದರೆ ಪ್ರೇಕ್ಷಕನಿಗೆ ಇಷ್ಟವಾದೀತೇ ಎಂಬುದು ಅವರ ಮೂಲಭೂತ ಪ್ರಶ್ನೆ. ‘ಟೋಟಲ್‌ ಧಮಾಲ್‌’ ಒಪ್ಪಿಕೊಳ್ಳಲು ಮೊದಲ ಕಾರಣವೇ ಚಿತ್ರಕತೆ.

ನಿರ್ದೇಶಕ ಇಂದ್ರ ಕುಮಾರ್‌ ಅವರ ‘ಧಮಾಲ್‌’ (2007) ಮತ್ತು 2011ರ ‘ಡಬಲ್‌ ಧಮಾಲ್‌’ನ ಮುಂದುವರಿದ ಆವೃತ್ತಿಯಾದ ‘ಟೋಟಲ್‌ ಧಮಾಲ್‌’, ಧಮಾಲ್‌ ಸರಣಿಯ ಮೂರನೇ ಮತ್ತು ಕೊನೆಯ ಆವೃತ್ತಿಯಾಗಿದೆ. ಬಹುಕಾಲದ ಬಳಿಕ ಮಾಧುರಿ ದೀಕ್ಷಿತ್‌ ಮತ್ತು ಅನಿಲ್‌ಕಪೂರ್‌ ಈ ಚಿತ್ರದ ಮೂಲಕ ತೆರೆಹಂಚಿಕೊಂಡಿರುವುದು ಪ್ರೇಕ್ಷಕರಲ್ಲಿ ಅತ್ಯಂತ ಕುತೂಹಲ ಹುಟ್ಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT