ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಯ್ಯ ಅಭಿಮಾನಿಗಳಿಗೆ ಅನಿಮೇಟೆಡ್‌ ಟೀಸರ್ ಗಿಫ್ಟ್‌

Last Updated 24 ಜೂನ್ 2020, 9:48 IST
ಅಕ್ಷರ ಗಾತ್ರ

ಕಳೆದ ಕೆಲ ತಿಂಗಳುಗಳಿಂದ ಟಾಲಿವುಡ್‌ ನಟ ನಂದಮುರಿ ಬಾಲಕೃಷ್ಣ ಅವರ ಅಭಿಮಾನಿಗಳು ಮೌನವಾಗಿದ್ದರು. ಅದಕ್ಕೆ ಕಾರಣ ಬಾಲಕೃಷ್ಣ ಅಭಿನಯದ ಸಾಲು ಸಾಲು ಸಿನಿಮಾಗಳು ಸೋಲು ಕಂಡಿದ್ದವು. ಈಗ ಬೊಯಪ‍ತಿ ಶ್ರೀನು ಹಾಗೂ ಬಾಲಯ್ಯ ಕಾಂಬಿನೇಷನ್‌ನಲ್ಲಿ ಹೊಸ ಚಿತ್ರವೊಂದು ಬರುತ್ತಿದೆ. ಈ ಚಿತ್ರದ ಬಗ್ಗೆ ಬಾಲಯ್ಯ ಅಭಿಮಾನಿಗಳು ತುಂಬಾನೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಾರಣ ಈ ಇಬ್ಬರ ಕಾಂಬಿನೇಷನ್‌ನಲ್ಲಿ ಸಿಂಹ ಹಾಗೂ ಲೆಜೆಂಡ್‌ನಂತಹ ಸೂಪರ್ ಹಿಟ್ ಸಿನಿಮಾಗಳು ಬಂದಿದ್ದವು. ಹಾಗಾಗಿ ನಿರೀಕ್ಷೆ ಕೊಂಚ ಜಾಸ್ತಿಯೇ ಇದೆ.

ಅವರ ನಿರೀಕ್ಷೆಗೆ ತಕ್ಕಂತೆ ಹೊಸ ಸಿನಿಮಾದ 64 ಸೆಕೆಂಡುಗಳ ಟೀಸರ್ ಬಿಡುಗಡೆ ಮಾಡಿದ್ದರು ಶ್ರೀನು. ಅದರಲ್ಲಿ ಮತ್ತೆ ಬಾಲಯ್ಯ ಮಾಸ್‌ ಲುಕ್‌ನಲ್ಲಿ ತೆರೆ ಮೇಲೆ ಬರುವುದು ಪಕ್ಕಾ ಆಗಿದೆ. ಆ ಕಾರಣಕ್ಕೆ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ. ಬಾಲಯ್ಯ ಜನ್ಮದಿನದಂದು ಬಿಡುಗಡೆಯಾದ ಆ ಟೀಸರ್‌ ಕೆಲವೇ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಸೃಷ್ಟಿಸಿತ್ತು. ಆಗ ಸಿನಿತಂಡ ಮರಳಿ ಅಭಿಮಾನಿಗಳಿಗಾಗಿ ಆ ಟೀಸರ್‌ನ ಅನಿಮೇಟೆಡ್‌ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಎಸ್‌ಆರ್‌ಎ1 ಎಂಟರ್‌ಟೈನ್‌ಮೆಂಟ್ ತಯಾರಿಸಿದ ಈ ಅನಿಮೇಟೆಡ್‌ ವಿಡಿಯೊ ಎಲ್ಲರನ್ನೂ ಆರ್ಕಷಿಸಿದೆ.

#ಬಿಬಿ3 ಹೆಸರಿನ(ಸದ್ಯದ ಹೆಸರು) ಈ ಸಿನಿಮಾಕ್ಕೆ ರ್ಮಿಯಾಲ ರವೀಂದ್ರ ರೆಡ್ಡಿ ಹಾಗೂ ತಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರಕ್ಕೆ ಇನ್ನು ಹೆಸರು ನಿಗದಿಯಾಗಿಲ್ಲ. ಆದರೆ ‘ಮೊನಾರ್ಕ್’‌ ಎಂಬ ಹೆಸರನ್ನು ಪರಿಗಣಿಸಲಾಗಿದೆ. ಸದ್ಯದಲ್ಲೇ ಸಿನಿಮಾ ಹೆಸರನ್ನು ಅಧೀಕೃತವಾಗಿ ತಿಳಿಸಲಿದೆ ಚಿತ್ರತಂಡ. ಈ ಚಿತ್ರಕ್ಕೆ ನಾಯಕಿ ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಯು ಟ್ಯೂಬ್ ಲಿಂಕ್‌:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT