ಮಂಗಳವಾರ, ಮೇ 24, 2022
24 °C

ಅಂಜಲಿ ಬಾರೊಟ್‌ ಹಸೆಮಣೆಗೇರಲು ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಸ್ಕ್ಯಾಮ್‌–1992’ ಚಿತ್ರದ ನಾಯಕಿ ಅಂಜಲಿ ಬಾರೊಟ್‌ ಅವರು ಗೌರವ್‌ ಅರೋರಾ ಅವರೊಂದಿಗೆ ಹಸೆಮಣೆ ಏರಲು ಸಿದ್ಧವಾಗಿದ್ದಾರೆ. ಭಾವೀ ಪತಿ ಗೌರವ್‌ ಅರೋರಾ ಅವರೊಂದಿಗೆ ಭರ್ಜರಿ ಬ್ಯಾಚುಲರ್‌ ಪಾರ್ಟಿಯನ್ನೂ ಹಮ್ಮಿಕೊಂಡಿದ್ದರು. ಈ ಜೋಡಿಯ ಚಿತ್ರಗಳು ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ. 

ಸ್ಕ್ಯಾಮ್‌ 1992 ಚಿತ್ರದ ಖ್ಯಾತ ಸಂಭಾಷಣೆ ‘ರಿಸ್ಕ್ ಹೈ ತೋಹ್ ಇಶ್ಕ್ ಹೈ’ ಸಾಲನ್ನು ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಬರೆದುಕೊಂಡಿದ್ದಾರೆ.

ಆ ಬರಹವುಳ್ಳ ಟೀಷರ್ಟ್‌ನ್ನು ಯುವಜೋಡಿ ಬಳಸಿದೆ. ಗೆಳೆಯರು ಮತ್ತು ಗೌರವ್‌ ಅವರೊಂದಿಗೆ ಅಂಜಲಿ ಸಂಭ್ರಮ ಆಚರಿಸಿದ್ದಾರೆ. ಜಾಲತಾಣಗಳಲ್ಲಿ ಈ ಪ್ರಕಟಣೆ ಗಮನಿಸಿದ ಅಭಿಮಾನಿಗಳು ಹೊಸ ಜೋಡಿಗೆ ಶುಭಕೋರಿದ್ದಾರೆ.ಕ್ರಿಯಾಶೀಲ ಪಾತ್ರಗಳಿಂದ ಅಂಜಲಿ ಅವರು ಬಾಲಿವುಡ್‌ನಲ್ಲಿ ಗಮನ ಸೆಳೆದ ಕಲಾವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು