ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಕ್ಟೇಲ್‌ 2ನಲ್ಲಿ ಇನ್ನೊಬ್ಬಳು ನಾಯಕಿ

Last Updated 27 ಮೇ 2020, 19:30 IST
ಅಕ್ಷರ ಗಾತ್ರ

ಕೊರೊನಾ ಲಾಕ್‌ಡೌನ್‌ಗೂ ಮೊದಲು ಸಿನಿಮಾ ಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದ್ದ ಸಿನಿಮಾಗಳ ಪಟ್ಟಿಯಲ್ಲಿ ‘ಲವ್‌ ಮಾಕ್ಟೇಲ್’ಗೂ ಒಂದು ಸ್ಥಾನವಿದೆ. ನಂತರ ಈ ಚಿತ್ರವನ್ನು ಬಹಳಷ್ಟು ಜನ ಅಮೆಜಾನ್‌ ಪ್ರೈಮ್‌ ಮೂಲಕವೂ ವೀಕ್ಷಿಸಿದ್ದಾರೆ. ಚಿತ್ರವು ಪಡೆದ ಯಶಸ್ಸನ್ನು ಕಂಡು ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರು ಇದರ ಎರಡನೆಯ ಭಾಗ ಕೂಡ ಬರಲಿದೆ ಎಂಬುದಾಗಿ ಪ್ರಕಟಿಸಿದ್ದರು.

ಈಗ ಕೃಷ್ಣ ಅವರು ಎರಡನೆಯ ಭಾಗಕ್ಕೆ ಸಂಬಂಧಿಸಿದ ಒಂದೆರಡು ಎಳೆಗಳನ್ನು ಬಿಟ್ಟುಕೊಟ್ಟಿದ್ದಾರೆ. ‘ಎರಡನೆಯ ಭಾಗದ ಬಗ್ಗೆಏನೂ ಹೇಳಲು ಆಗದು’ ಎನ್ನುತ್ತಲೇ ಮಾತು ಆರಂಭಿಸಿದ ಕೃಷ್ಣ, ‘ಎಲ್ಲರಿಗೂ ಇದರ ಬಗ್ಗೆ ಕುತೂಹಲ ಇದೆ. ಇದು ಲವ್‌ ಮಾಕ್ಟೇಲ್‌ನ ಮುಂದುವರಿದ ಭಾಗ ಆಗಿರುತ್ತದೆ. ಕಥಾ ನಾಯಕ ಉಡುಪಿಯಿಂದ ಹೊರಟ ನಂತರ ಅವನ ಜೀವನದಲ್ಲಿ ಏನಾಗುತ್ತದೆ ಎಂಬುದರ ವಿವರಣೆ ಇರಲಿದೆ’ ಎಂದು ‘ಪ್ರಜಾಪ್ಲಸ್‌’ಗೆ ತಿಳಿಸಿದರು.

ಮಿಲನಾ ನಾಗರಾಜ್ ಅವರು ‘ಲವ್‌ ಮಾಕ್ಟೇಲ್‌’ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅವರ ಪಾತ್ರವು ಎರಡನೆಯ ಭಾಗದಲ್ಲಿ ಅಲ್ಲಿ–ಇಲ್ಲಿ ಫ್ಲ್ಯಾಷ್‌ಬ್ಯಾಕ್‌ ರೂಪದಲ್ಲಿ ಕಾಣಿಸಿಕೊಳ್ಳಬಹುದು ಎಂದರು ಕೃಷ್ಣ.

ಅಂದಹಾಗೆ, ಎರಡನೆಯ ಭಾಗದಲ್ಲಿ ಇನ್ನೊಬ್ಬಳು ಹೀರೊಯಿನ್ ಪ್ರವೇಶ ಆಗಲಿದೆ. ಆದರೆ, ಆ ನಾಯಕಿಯ ಪಾತ್ರವನ್ನು ಯಾರು ನಿಭಾಯಿಸಲಿದ್ದಾರೆ ಎನ್ನುವುದನ್ನು ಕೃಷ್ಣ ಗುಟ್ಟಾಗಿಯೇ ಇರಿಸಿದರು. ಮೊದಲ ಭಾಗದಲ್ಲಿ ಎಲ್ಲರ ಗಮನ ಸೆಳೆದಿದ್ದ ವಿಜಯ್ ಮತ್ತು ಸುಷ್ಮಾ ಅವರ ಪಾತ್ರಗಳು ಎರಡನೆಯ ಭಾಗದಲ್ಲಿಯೂ ಮುಂದುವರಿಯಲಿವೆ ಎಂದರು.

ಈ ಚಿತ್ರವನ್ನು 2021ರ ಆರಂಭದ ವೇಳೆಗೆ ತೆರೆಗೆ ತರುವ ಉದ್ದೇಶ ಕೃಷ್ಣ ಅವರದ್ದು. ಇದನ್ನು ಸಿನಿಮಾ ಮಂದಿರಗಳ ಮೂಲಕವೇ ಬಿಡುಗಡೆ ಮಾಡಲಾಗುತ್ತದೆ, ಒಟಿಟಿ ಮೂಲಕ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದರ ಸ್ಕ್ರಿಪ್ಟ್‌ಗೆ ಸಂಬಂಧಿಸಿದ ಕೆಲಸಗಳು ಬಹುತೇಕ ಪೂರ್ಣಗೊಂಡಿವೆಯಂತೆ. ಜೂನ್‌ನಲ್ಲಿ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದರೆ, ತಕ್ಷಣ ಆ ಕೆಲಸ ಆರಂಭಿಸಬೇಕು ಎಂಬ ಆಲೋಚನೆಯಲ್ಲಿ ಇದ್ದಾರೆ ಕೃಷ್ಣ. ಮಿಲನಾ ಅವರು ಈ ಚಿತ್ರದ ನಿರ್ಮಾಣದ ಕೆಲಸಗಳನ್ನು ಹಂಚಿಕೊಳ್ಳುವುದರ ಜೊತೆಯಲ್ಲೇ ಸಹ ನಿರ್ದೇಶನದ ಹೊಣೆಯನ್ನೂ ಹೊತ್ತುಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT