ಬುಧವಾರ, ಆಗಸ್ಟ್ 4, 2021
22 °C

ತಾಯಿಗೆ ಕೊರೊನಾ ಸೋಂಕು: ರಹಸ್ಯ ಕಾಪಾಡಿದ ಅನುಪಮ್‌ ಖೇರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟ ಅನುಪಮ್ ಖೇರ್ ಅವರ‌ ತಾಯಿ, ಸಹೋದರ ಮತ್ತು ಕುಟುಂಬ ಸದಸ್ಯರಿಗೆ‌ ಕೊರೊನಾ ಸೋಂಕು ತಗುಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಮುಂಬೈನ ಕೋಕಿಲಾಬೆನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನುಪಮ್‌ ತಾಯಿ ದುಲ್ಹಾರಿ ‌ಅವರಿಗೆ ತಮಗೆ ಸೋಂಕು ತಗುಲಿರುವ ವಿಷಯ ಗೊತ್ತಿಲ್ಲ. 

ಅನುಪಮ್‌ ಖೇರ್ ಟ್ವಿಟರ್‌ನಲ್ಲಿ ಹಂಚಿಕೊಂಡ ಹೊಸ ವಿಡಿಯೊದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.‌ 

‘ಹೌದು, ನನ್ನ ತಾಯಿಗೆ ಕೊರೊನಾ ಸೋಂಕು ತಗುಲಿರುವ ವಿಷಯವನ್ನು ಅವರಿಗೆ ತಿಳಿಸಿಲ್ಲ. ಸಾಮಾನ್ಯ ಇನ್‌ಫೆಕ್ಷನ್‌(ಸೋಂಕು) ಆಗಿದೆ ಎಂದು ಸುಳ್ಳು ಹೇಳಲಾಗಿದೆ. ನಿಜವಾದ ವಿಷಯವನ್ನು ಅವರಿಂದ ಮುಚ್ಚಿಡಲಾಗಿದೆ. ಸಮಯ, ಸಂದರ್ಭ ಮತ್ತು ಪರಿಸ್ಥಿತಿ ಅರ್ಥ ಮಾಡಿಕೊಳ್ಳಲಾರದಷ್ಟು ಆಕೆ ದಡ್ಡಳಲ್ಲ’ ಎಂದು ‌ ಖೇರ್ ಹೇಳಿದ್ದಾರೆ.

ಕೋವಿಡ್‌–19 ದೃಢಪಡುತ್ತಲೇ ಭಾನುವಾರ ದುಲ್ಹಾರಿ ಅವರನ್ನು ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ ಸೇರಿಸಲಾಗಿದೆ. ಅನುಪಮ್ ಸಹೋದರ ರಾಜು ಖೇರ್‌, ಅವರ ಹೆಂಡತಿ ಮತ್ತು ಮಗಳು ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ.

‘ತುಂಬಾ ಲವಲವಿಕೆಯಿಂದ ಇರುವ ಅಮ್ಮ ಆಸ್ಪತ್ರೆಯಿಂದಲೇ, ನನ್ನ ಹಾಗೂ ನನ್ನ ಸ್ನೇಹಿತರಾದ ಅನಿಲ್‌ ಕಪೂರ್, ಸತೀಶ್‌ ಕೌಶಿಕ್ ಮುಂತಾದವರ ಆರೋಗ್ಯ ವಿಚಾರಿಸುತ್ತಾರೆ. ಸಂಬಂಧಿಗಳ ಜತೆ ಫೋನಿನಲ್ಲಿ ತಮಾಷೆ, ಗೇಲಿ ಮಾಡುತ್ತ ಕಾಲ ಕಳೆಯುತ್ತಿದ್ದಾರೆ’ ಎಂದು ಖೇರ್‌ ತಮ್ಮ ತಾಯಿಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಎಲ್ಲರೂ ನಿಮ್ಮ ಅಪ್ಪ, ಅಮ್ಮಂದಿರನ್ನು ಚೆನ್ನಾಗಿ ನೋಡಿಕೊಳ್ಳಿ. ನಾವು ಅವರನ್ನು ಎಷ್ಟು ಪ್ರೀತಿಸುತ್ತೇವೆ, ಅವರು ನಮಗೆ ಎಷ್ಟು ಮುಖ್ಯ ಎಂಬುದನ್ನು ತಿಳಿಸಿ’ ಎಂದು ಸಲಹೆ ಮಾಡಿದ್ದಾರೆ.   

ಲಿಂಕ್‌: https://www.instagram.com/tv/CCoTx3QgUE5/?utm_source=ig_web_copy_link

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು