ಶೀರ್ಷಾಸನದಲ್ಲಿ ಅನುಷ್ಕಾ ಶರ್ಮಾ

ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ, ಗರ್ಭಿಣಿ ಅನುಷ್ಕಾ ಶರ್ಮಾ ಅವರು ಶೀರ್ಷಾಸನ ಹಾಕಿರುವ ಚಿತ್ರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ತಾಣದಲ್ಲಿ ಗಮನ ಸೆಳೆದಿದೆ.
ಶೀರ್ಷಾಸನ ಭಂಗಿಯಲ್ಲಿರುವ ಅವರ ಕಾಲುಗಳನ್ನು ಪತಿ ವಿರಾಟ್ ಕೊಹ್ಲಿ ಹಿಡಿದುಕೊಂಡಿದ್ದಾರೆ.
ಈ ಚಿತ್ರಕ್ಕೆ ದೀರ್ಘ ವಿವರಣೆ ಕೊಟ್ಟಿರುವ ಅನುಷ್ಕಾ, ‘ಯೋಗ ನನ್ನ ಜೀವನದ ಭಾಗ. ಆದರೆ, ಈಗನ ಸ್ಥಿತಿಯಲ್ಲಿ ತಲೆಕೆಳಗಾಗಿ ನಿಲ್ಲುವುದು ಅಷ್ಟು ಸುಲಭವಲ್ಲ. ಆದರೆ, ನನ್ನ ದೇಹದ ಸಮತೋಲನ ಕಾಯ್ದುಕೊಳ್ಳಲು ಪತಿ ನೆರವಾಗಿದ್ದಾರೆ. ಇದೆಲ್ಲವೂ ನನ್ನ ಯೋಗ ಶಿಕ್ಷಕರ ಮೇಲ್ವಿಚಾರಣೆಯಲ್ಲೇ ನಡೆಯುತ್ತಿದೆ. ಈ ಸಮಯದಲ್ಲಿ ಯೋಗ ಅಭ್ಯಾಸ ಮಾಡುತ್ತಿರುವುದು ನನಗೆ ಹೆಮ್ಮೆ ಎನಿಸಿದೆ ಎಂದು ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.