ನಟಿ ಅನುಷ್ಕಾ ಶರ್ಮಾ ಬಾಲಿವುಡ್‌ಗೆ ಗುಡ್ ಬೈ?

ಮಂಗಳವಾರ, ಜೂನ್ 18, 2019
26 °C

ನಟಿ ಅನುಷ್ಕಾ ಶರ್ಮಾ ಬಾಲಿವುಡ್‌ಗೆ ಗುಡ್ ಬೈ?

Published:
Updated:
Prajavani

ನಟಿ ಅನುಷ್ಕಾ ಶರ್ಮಾ ಬಾಲಿವುಡ್‌ಗೆ ಗುಡ್ ಬೈ ಹೇಳಲಿದ್ದಾರೆ ಅನ್ನುವ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ. ‘ಜೀರೊ’ ಸಿನಿಮಾದ ಸೋಲಿನಿಂದ ಬೇಸರಗೊಂಡಿರುವ ಅನುಷ್ಕಾ, ಈಚೆಗೆ ಸಂದರ್ಶನವೊಂದರಲ್ಲಿ ಹಿಂದಿ ಚಿತ್ರರಂಗಕ್ಕೆ ವಿದಾಯ ಹೇಳುವುದಾಗಿ ತಿಳಿಸಿದ್ದಾರೆ.

‘ನಟಿಯಾಗಿ ನನ್ನ ವೃತ್ತಿಜೀವನದಲ್ಲಿ ನಾನು ಯಾವ ಸ್ಥಾನ ಗಳಿಸಬೇಕಿತ್ತೋ ಆ ಸ್ಥಾನವನ್ನು ಗಳಿಸಿದ್ದೇನೆ.  ಕಾಲ ಕಳೆಯಲಿಕ್ಕಾಗಿ ನಾನು ಸಿಕ್ಕಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳುವ ಅಗತ್ಯವಿಲ್ಲ’ ಎಂದು ಸೂಚ್ಯವಾಗಿ ವಿದಾಯ ಮಾತುಗಳನ್ನಾಡಿದ್ದಾರೆ. 

‘ಕಳೆದ ಮೂರು ವರ್ಷಗಳಲ್ಲಿ ನಾನು ಹೆಕ್ಟಿಕ್ ಅನ್ನುವಷ್ಟು ಮಟ್ಟಿಗೆ ಫ್ಯಾಷನ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಅಂತೆಯೇ ಬಹುಬೇಡಿಕೆಯ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಒಂದೇ ವರ್ಷದಲ್ಲಿ ಪರಿ, ಸೂಯಿಧಾಗಾ ಮತ್ತು ಜೀರೊದಂಥ ಸಿನಿಮಾದಲ್ಲಿ ನಟಿಸುವುದು ತಮಾಷೆಯ ಮಾತಲ್ಲ. ಎಲ್ಲವನ್ನೂ ಭಿನ್ನ ಮತ್ತು ಹೆಚ್ಚು ಹೋಮ್ ವರ್ಕ್ ಬೇಡುವಂಥ ಪಾತ್ರಗಳೇ ಆಗಿದ್ದವು’ ಅನ್ನುವುದು ಅನುಷ್ಕಾ ವಿವರಣೆ.

ಶಾರುಕ್ ಖಾನ್ ಜೊತೆಗೆ ‘ಜೀರೊ’ ಸಿನಿಮಾದಲ್ಲಿ ಸೆರೆಬ್ರಲ್ ಪಾಲ್ಸಿ ಪೀಡಿತೆ ವಿಜ್ಞಾನಿ ಪಾತ್ರದಲ್ಲಿ ಅನುಷ್ಕಾ ಅಭಿನಯಕ್ಕೆ ವಿಮರ್ಶಕರು ಮೆಚ್ಚುಗೆ ಸೂಚಿಸಿದ್ದರೂ, ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿತ್ತು. ಸದ್ಯಕ್ಕೆ ಪತಿ, ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆಗೆ ಕಾಲ ಕಳೆಯುತ್ತಿರುವ ಅನುಷ್ಕಾ, ಇದುವರೆಗೂ ಸ್ಪಷ್ಟವಾಗಿ ತಮ್ಮ ನಿಲುವನ್ನು ಖಚಿತಪಡಿಸಿಲ್ಲ.

‘ರಬ್‌ ನೆ ಬನಾ ದಿ ಜೋಡಿ’ ಸಿನಿಮಾದಲ್ಲಿ ಶಾರುಕ್‌ಗೆ ನಾಯಕಿಯಾಗಿ ಸಿನಿರಂಗ ಪ್ರವೇಶಿಸಿದ್ದ ಅನುಷ್ಕಾ, ಶಾರುಕ್ ಜೊತೆಗಿನ ‘ಜೀರೊ’ ಸಿನಿಮಾದ ಮೂಲಕವೇ ಬಾಲಿವುಡ್‌ಗೆ ಗುಡ್ ಬೈ ಹೇಳುತ್ತಿರುವುದು ಕಾಕತಾಳೀಯ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !