ಸೋಮವಾರ, ಡಿಸೆಂಬರ್ 9, 2019
24 °C

ಅನುಷ್ಕಾ ಕಂಡ ‘ಸ್ವರ್ಗ ಸುಖ’

Published:
Updated:
Deccan Herald

‘ಕ್ಷಣಗಳು ಸರಿದುದೇ ಗೊತ್ತಾಗದೇ ಇರುವ ಸ್ಥಿತಿಯೆಂದರೆ ಅದು ಸ್ವರ್ಗ ಸುಖವೇ. ಒಬ್ಬ ಒಳ್ಳೆಯ ವ್ಯಕ್ತಿಯನ್ನು ಮದುವೆಯಾಗುವುದೆಂದರೂ ಸ್ವರ್ಗ ಸುಖವೇ’.‌ ಕಳೆದ ಡಿಸೆಂಬರ್‌ 11ರಂದು ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರನ್ನು ಮದುವೆಯಾಗಿದ್ದ ಬಾಲಿವುಡ್‌ ಬೆಡಗಿ ಅನುಷ್ಕಾ ಶರ್ಮಾ, ಒಂದು ವರ್ಷದ ದಾಂಪತ್ಯದ ಅನುಭವವನ್ನು ಚುಟುಕಾಗಿ ಹೀಗೆ ಹಂಚಿಕೊಂಡಿದ್ದಾರೆ. 

ಡಿಸೆಂಬರ್‌ 11ರ ಮಂಗಳವಾರ ಅನುಷ್ಕಾ ಮಾಡಿರುವ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂ ಪೋಸ್ಟ್‌ ಜೊತೆಗೆ ಒಂದು ವಿಡಿಯೊ ಕೂಡಾ ಇದೆ. ಅಂದು ಮದುವೆಯ ವಿವರಗಳನ್ನು ತೀರಾ ಗುಪ್ತ್‌ ಮತ್ತು ಖಾಸ್‌ಬಾತ್‌ ಎಂಬಂತೆ ಬಚ್ಚಿಟ್ಟುಕೊಂಡಿದ್ದ ಅನುಷ್ಕಾ ಇಡೀ ಮದುವೆಯ ದೃಶ್ಯಾವಳಿಗಳಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

‘ಈ ಒಂದು ವರ್ಷ ನನಗೆ ಸ್ವರ್ಗ ಸುಖವನ್ನು ಪರಿಚಯಿಸಿದೆ’ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.

ಬದುಕು ಬದಲಿಸಿದಳು: ‌ಹೆಂಡತಿ ಬಂದ ಮೇಲೆ ಬದುಕಿನ ಗತಿ, ಯೋಚಿಸುವ ರೀತಿ, ಇಡೀ ವ್ಯಕ್ತಿತ್ವ ಬದಲಾಗಿದೆ ಎಂದು ವಿರಾಟ್‌ ಕೊಹ್ಲಿ ಹೇಳಿಕೊಂಡಿದ್ದಾರೆ. ‘ಹಿಂದೆ ನಾನು ವಾಸ್ತವವಾದಿಯಾಗಿರಲಿಲ್ಲ. ಆದರೆ ನಾನು ಯೋಚಿಸುವ ರೀತಿಯನ್ನೂ ಅನುಷ್ಕಾ ಬದಲಿಸಿದಳು. ನಾನು ಉತ್ತರ ಭಾರತ ಮೂಲದವನು. ಅವಳು ಬೆಳೆದ ವಾತಾವರಣವೇ ಬೇರೆ. ಆದರೆ ಅವಳು ನನ್ನ ಬದುಕಿನಲ್ಲಿ ಬಂದ ಬಳಿಕ ನನ್ನನ್ನು ನಾನು ಬದಲಾಯಿಸಿಕೊಂಡೆ. ಇನ್ನೊಬ್ಬರಿಗಾಗಿ ಯೋಚಿಸುವುದನ್ನೂ ಕಲಿತೆ’ ಎಂದು ಪತ್ನಿಯನ್ನು ಮನಪೂರ್ವಕ ಹೊಗಳಿದ್ದಾರೆ. 

ಅನುಷ್ಕಾ ತಮ್ಮ ಹೊಸ ಚಿತ್ರ ‘ಜೀರೊ’ದ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೂ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲು ಆಸ್ಟ್ರೇಲಿಯಾಕ್ಕೆ  ಹಾರಿದ್ದಾರೆ. ಈಗ ಮುಂಬೈನಲ್ಲೇ ನೆಲೆಸಿರುವ ದಂಪತಿಗೆ ಅಭಿಮಾನಿಗಳು ಮುತ್ತಿಗೆ ಹಾಕುವುದು ಸ್ವಲ್ಪ ಕಡಿಮೆಯಾಗಿದೆ ಎಂದೂ ವಿರಾಟ್‌ ಹೇಳಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು