2026ರ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಅವರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಅವರ ಪತ್ನಿ ಅನುಷ್ಕಾ ಶರ್ಮಾ ದುಬಾರಿ ಬೆಲೆಯ ಔಟ್ಫಿಟ್ ಧರಿಸಿದ್ದರು. ಅವರ ಈ ಲುಕ್ ಎಲ್ಲರ ಗಮನ ಸೆಳೆದಿದೆ.

ಸಾಮಾನ್ಯವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳಿದ್ದಾಗ ಅನುಷ್ಕಾ ಅವರು ತಪ್ಪದೇ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ. ಅದರಂತೆ ಗುಜರಾತ್ ವಿರುದ್ಧದ ಪಂದ್ಯಕ್ಕೂ ಅನುಷ್ಕಾ ಅವರು ಆಗಮಿಸಿದ್ದರು. ಇದರ ಜೊತೆಗೆ ಅವರು ಸೆಜಾನೆ ಟಾಪ್ ಹಾಗೂ ಕಾರ್ಟಿಯರ್ ವಾಚ್ ಕಟ್ಟಿದ್ದರು.

ಅನುಷ್ಕಾ ಶರ್ಮಾ ಅವರು ಧರಿಸಿದ್ದ, ಕಾರ್ಟಿಯರ್ ವಾಚ್ ದುಬಾರಿ ಕೈಗಡಿಯಾರಗಳಲ್ಲಿ ಒಂದಾಗಿದೆ. ಈ ವಾಚ್ನ ಬೆಲೆ ಬರೋಬ್ಬರಿ ₹1 ಲಕ್ಷಕ್ಕೂ ಅಧಿಕ ಎಂದು ವರದಿಯಾಗಿದೆ. ಪಂದ್ಯದ ವೇಳೆ ಅವರು ಧರಿಸಿದ್ದ ಸೆಜಾನೆ ಟಾಪ್ ₹17,000 ಮೌಲ್ಯದ್ದಾಗಿದೆ. ಸೆಜಾನೆ ಟಾಪ್ ಉದ್ದ ತೋಳಿನಿಂದ ಕೂಡಿದ್ದು, ಕಸೂತಿ ಕಲೆಯಿಂದ ತಯಾರಿಸಲಾಗಿದೆ. ಡ್ರೆಸ್ನ ಕುತ್ತಿಗೆ ಭಾಗವು ವಿ ಆಕಾರದಲ್ಲಿದೆ.

ಅನುಷ್ಕಾ ಶರ್ಮಾ ಅವರು ಕೈಗೆ ಕಟ್ಟಿದ್ದ ಕಾರ್ಟಿಯರ್ ವಾಚ್ 1980ರ ದಶಕದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದೊಂದು ಆ್ಯಂಟಿಕ್ ಫೀಸ್ ಆಗಿದೆ. ಇದನ್ನು ಆಭರಣ ಹಾಗೂ ವಾಚ್ ಎರಡರಂತೆಯೂ ಬಳಸಬಹುದು. ವಿಶೇಷವಾಗಿ ಮಹಿಳೆಯರಿಗಾಗಿಯೇ ಈ ವಾಚ್ ತಯಾರಿಸಲಾಗಿದೆ.

ವಾಚ್ನ ಗಡಿಯಾರವು 18 ಕ್ಯಾರಟ್ ಚಿನ್ನದಿಂದ ತಯಾರಿಸಲಾಗಿದೆ. ಗಡಿಯಾರದ ಸುತ್ತ ನೀಲಿ ಬಣ್ಣದ ಮಣಿಯನ್ನು ಪೊಣಿಸಲಾಗಿದೆ. ಕತ್ತಿ ಆಕಾರದ ಗಡಿಯಾರದ ಮುಳ್ಳುಗಳು ಇದರ ವಿಶೇಷತೆಯಾಗಿದೆ.

ಅನುಷ್ಕಾ ಶರ್ಮಾ ಅವರ ಕೈ ಗಡಿಯಾರದ ನಿಖರ ಬೆಲೆ ದೃಢೀಕರಿಸಲ್ಪಟ್ಟಿಲ್ಲವಾದರೂ, ಭಾರತದಲ್ಲಿ ಪ್ಯಾಂಥೆರೆ ಡಿ ಕಾರ್ಟಿಯರ್ ಕೈಗಡಿಯಾರಗಳ ಬೆಲೆ ಸುಮಾರು ₹28 ಲಕ್ಷದಿಂದ ₹61 ಲಕ್ಷದ ವರಗೆ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.