ಶನಿವಾರ, ಜೂನ್ 6, 2020
27 °C

Video: ‘ಏಯ್‌ ಕೊಹ್ಲಿ...ಕೊಹ್ಲಿ...ಚೌಕಾ ಮಾರ್‌’ ಎಂದ ಅನುಷ್ಕಾ ಶರ್ಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಅನುಷ್ಕಾ ಶರ್ಮಾ ‘ಏಯ್‌ ಕೊಹ್ಲಿ...ಕೊಹ್ಲಿ...ಚೌಕಾ ಮಾರ್‌’ ಎಂದು ಪಕ್ಕಾ ಲೋಕಲ್‌ ಭಾಷೆಯಲ್ಲಿ ಹೇಳುವ ಮೂಲಕ ಪತಿ ಕೊಹ್ಲಿಗೆ ಅಭಿಮಾನಿಗಳನ್ನು ನೆನಪಿಸುವಂತೆ ಮಾಡಿದ್ದಾರೆ.

ಲೌಕ್‌ಡೌನ್‌ ಪರಿಣಾಮ ಮನೆಯಲ್ಲೇ ಕಾಲ ಕಳೆಯುತ್ತಿರುವ ಈ ದಂಪತಿ ಅಭಿಮಾನಿಗಳಿಗೆ ಕೊರೊನಾ ವೈರಸ್‌ ಕುರಿತಾದ ಜಾಗೃತಿ ವಿಡಿಯೊಗಳನ್ನು ಮಾಡುತ್ತಿದ್ದರು. ಇದೀಗ ರಂಜನೆಯ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ತೇಲಿ ಬಿಟ್ಟಿದ್ದಾರೆ.

ಈ ವಿಡಿಯೊದಲ್ಲಿ ಅನುಷ್ಕಾ ಕೊಹ್ಲಿ ಅಭಿಮಾನಿಯಾಗಿದ್ದು ಏಯ್‌ ಕೊಹ್ಲಿ ಬೌಂಡರಿ ಹೊಡಿ ಎಂದು ಹೇಳಿದ್ದಾರೆ. ಅದು ಪಕ್ಕಾಲೋಕಲ್‌ ಭಾಷೆಯಲ್ಲಿ! ಇದಕ್ಕೆ ಕೊಹ್ಲಿ ತಮ್ಮ ಕಣ್ಣುಗಳ ಮೂಲಕವೇ ಉತ್ತರ ಕೊಡುವುದು ಅಭಿಮಾನಿಗಳಿಗೆ ಸಖತ್‌ ಖುಷಿ ಕೊಟ್ಟಿದೆ.

ಈ ವಿಡಿಯೊ ಅಪ್‌ಲೋಡ್‌ ಆದ 19 ಗಂಟೆಯಲ್ಲಿ 90 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಲಾಕ್‌ಡೌನ್‌ ಪರಿಣಾಮ ಮದುವೆಯಾದ ಬಳಿಕ ಅನುಷ್ಕಾ ಮತ್ತು ಕೊಹ್ಲಿ ಇಷ್ಟುದಿನಗಳ ಕಾಲ ಒಟ್ಟಿಗೆ ಇರುವುದು ಇದೇ ಮೊದಲು. ಅನುಷ್ಕಾ ಜೊತೆ ಒಟ್ಟಿಗೆ ಕಾಲ ಕಳೆಯುತ್ತಿರುವುದು ಹೊಸ ಅನುಭವ ನೀಡಿದೆ ಎಂದು ಕೊಹ್ಲಿ ಈ ಹಿಂದೆ ವಿಡಿಯೊದಲ್ಲಿ ಹೇಳಿಕೊಂಡಿದ್ದರು. 

‘ಕೊಹ್ಲಿ ಕ್ರಿಕೆಟ್‌ ಆಡುವುದನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಮೈದಾನದಲ್ಲಿ ಅವರಿಗೆ ಅಭಿಮಾನಿಗಳಿಂದ ಪ್ರೀತಿ ಸಿಗುತ್ತದೆ. ಅದರಲ್ಲೂ ಅವರು ಇಂತಹ ಅಭಿಮಾನಿಗಳನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಅಂತಹ ಅಭಿಮಾನಿಯಂತೆ ನಟಿಸಿ ಆ ಪ್ರೀತಿ ಕೊಡುವ ಪುಟ್ಟ ಪ್ರಯತ್ನ ಇದು’ ಎಂದು ಅನುಷ್ಕಾ ವಿಡಿಯೊ ಜೊತೆಗೆ ಸಂದೇಶವನ್ನು ಬರೆದುಕೊಂಡಿದ್ದಾರೆ.

ಕೊರೊನಾ ವೈರಸ್‌ ಪರಿಣಾಮ ಅನುಷ್ಕಾ ಮತ್ತು ಕೊಹ್ಲಿಯನ್ನು ಅಭಿಮಾನಿಗಳು ಮಿಸ್‌ ಮಾಡಿಕೊಳ್ಳುತ್ತಿರುವುದು ಸುಳ್ಳಲ್ಲ. ಈ ತಾರಾ ಜೋಡಿ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಸದ್ಯಕ್ಕೆ ಸಮಾಧಾನದ ಸಂಗತಿ ಎಂದು ಕೆಲ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು