ಮುಂಬೈ: ಬಾಲಿವುಡ್ ನಟಿ, ಕ್ರಿಕೆಟರ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಯಾವುದೇ ಸಿನಿಮಾದಲ್ಲಿ ಅಲ್ಲ. ಬದಲಾಗಿ ‘ಜೀವಾ’ ಆಭರಣಗಳ ಜಾಹೀರಾತಿನಲ್ಲಿ.

ಹಸಿರು ಸೀರೆಯುಟ್ಟು, ಹಣೆಯ ಮೇಲೆ ಕೆಂಪು ಬೊಟ್ಟು ಇಟ್ಟುಕೊಂಡು, ಜೀವಾ ಆಭರಣ ಧರಿಸಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ. ಮತ್ತೆ ತೆರೆಯ ಮೇಲೆ ಅನುಷ್ಕಾರನ್ನು ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ‘ಅನುಷ್ಕಾ ಅವರಿಗೆ 38 ವರ್ಷವಾಗಿದೆ ಎಂದರೆ ನಂಬಲಾಗದು’ ಎಂದು ಕಮೆಂಟ್ ಮಾಡಿದ್ದಾರೆ.

ಮಕ್ಕಳ ಆರೈಕೆ, ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಅನುಷ್ಕಾ ಸಿನಿಮಾಗಳಿಂದ ದೂರ ಉಳಿದಿದ್ದರು. ಅಲ್ಲದೆ ಯಾವುದೇ ಜಾಹೀರಾತಿನಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆಗಾಗ ಕ್ರಿಕೆಟ್ ಪಂದ್ಯಗಳ ಸಮಯದಲ್ಲಿ ಪತಿ ವಿರಾಟ್ ಕೊಹ್ಲಿಯನ್ನು ಹುರಿದುಂಬಿಸಲು ಮೈದಾನಕ್ಕೆ ಬರುತ್ತಿದ್ದರು.

ಅನುಷ್ಕಾ ಕೊನೆಯ ಬಾರಿ 2018ರಲ್ಲಿ ತೆರೆ ಕಂಡ ಶಾರುಖ್ ಖಾನ್ ನಟನೆಯ ’ಝೀರೋ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ, 2022ರಲ್ಲಿ ಚಿತ್ರೀಕರಣ ಮುಗಿಸಿರುವ ಜೂಲನ್ ಗೋಸ್ವಾಮಿ ಅವರ ಜೀವನ ಚರಿತ್ರೆಯಾದ ‘ಚಕ್ಡಾ ಎಕ್ಸ್ಪ್ರೆಸ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾ ಬಿಡುಗಡೆಯ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.