ತಂತ್ರಜ್ಞನನ್ನು ನೆನೆದ ಅನುಷ್ಕಾ

ಗುರುವಾರ , ಜೂನ್ 20, 2019
30 °C

ತಂತ್ರಜ್ಞನನ್ನು ನೆನೆದ ಅನುಷ್ಕಾ

Published:
Updated:
Prajavani

‘ಬಾಹುಬಲಿ 2’, ‘ಭಾಗಮತಿ’ ಸಿನಿಮಾದ ಯಶಸ್ಸಿನ ನಂತರ ನಟಿ ಅನುಷ್ಕಾ ಶೆಟ್ಟಿ, ಮಾಧವನ್ ಜತೆಗೆ ‘ಸೈಲೆನ್ಸ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ತೂಕವನ್ನೂ ಇಳಿಸಿಕೊಂಡಿರುವ ಅನುಷ್ಕಾ, ಇದಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಿಬಂದದ್ದೂ ಆಯಿತು.

ಆದರೆ, ಅನುಷ್ಕಾ ಈಗ ಸುದ್ದಿಯಾಗಲು ಬೇರೆಯದ್ದೇ ಕಾರಣವಿದೆ. ಅನುಷ್ಕಾ ಈಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರವಿ ಅನ್ನುವ ಸಹಾಯಕ ತಂತ್ರಜ್ಞನನ್ನು ನೆನಪಿಸಿಕೊಂಡು ಫೋಟೊವೊಂದನ್ನು ಹಂಚಿ ಕೊಂಡಿದ್ದಾರೆ. 7 ವರ್ಷಗಳ ಹಿಂದೆ ನಿಧನರಾದ ರವಿ ಕುರಿತು ಭಾವುಕವಾಗಿ ಬರೆದಿರುವ ಅನುಷ್ಕಾ, ‘ಯಾರು ನಮ್ಮನ್ನು ನಿಜವಾಗಿ ಪ್ರೀತಿಸುತ್ತಾರೋ ಅವರು ಖಂಡಿತಾ ನಮ್ಮನ್ನು ಬಿಟ್ಟುಹೋಗುವುದಿಲ್ಲ...ಕೆಲವು ಸಂಗತಿಗಳನ್ನು ಸಾವು ಮುಟ್ಟಲಾಗದು.

14 ವರ್ಷಗಳ ವೃತ್ತಿಜೀವನದಲ್ಲಿ ನಿಮ್ಮ ಸಮೀಪದ ಸ್ನೇಹಿತರು ನಿಮ್ಮ ಜೊತೆಗೇ ಇದ್ದವರು ಕೊನೆಯವರೆಗೂ ಜೊತೆಗೇ ಇರುತ್ತಾರೆ. 7 ವರ್ಷಗಳ ನಂತರವೂ, ರವಿಯ ಸುಂದರ ಆತ್ಮ ನನ್ನಲ್ಲಿ ಅಚ್ಚರಿಯಾಗಿಯೇ ಉಳಿದಿದೆ. ಸತ್ತ ಮೇಲಿನ ಜೀವನದ ಬಗ್ಗೆ ನನಗೇನೂ ತಿಳಿದಿಲ್ಲ. ಆದರೆ, ನನ್ನ ಹೃದಯದೊಳಗೆ ರವಿ ಸದಾ ಜೀವಂತವಾಗಿರುತ್ತಾನೆ...’ ಎಂದಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !