ಶುಕ್ರವಾರ, ಆಗಸ್ಟ್ 19, 2022
27 °C

ಸಾಮಾನ್ಯರಂತೆ ದೇವಸ್ಥಾನ ಸುತ್ತಿದ ನಟಿ ಅನುಷ್ಕಾ ಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡದ ಹುಡುಗಿ ನಟಿ ಅನುಷ್ಕಾ ಶೆಟ್ಟಿ ಟಾಲಿವುಡ್‌ನಲ್ಲಿ ಸ್ಟಾರ್ ನಟಿ. ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಆಕೆ ತುಂಬಾ ಸರಳವಾಗಿರುತ್ತಾರೆ. ಇತ್ತೀಚೆಗೆ ಇವರು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಪೋಲಾವರಂನಲ್ಲಿರುವ ಶ್ರೀ ವೀರಭದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ತನ್ನ ಸ್ನೇಹಿತೆಯ ಜೊತೆ ಬೋಟ್‌ನಲ್ಲಿ ಸಾಮಾನ್ಯರಂತೆ ಪ್ರಯಾಣ ಮಾಡಿದ್ದರು ಅನುಷ್ಕಾ. ಖ್ಯಾತ ವಸ್ತ್ರ ವಿನ್ಯಾಸಕಿ ಪ್ರಶಾಂತಿ ತಿರ್ಪಿನೇನಿ ಅನುಷ್ಕಾಗೆ ಜೊತೆಯಾಗಿದ್ದರು. ತಮ್ಮ ಪ್ರಯಾಣದ ವೇಳೆ ಅನುಷ್ಕಾ ಮಾಸ್ಕ್ ಧರಿಸಿದ್ದ ಕಾರಣ ಯಾರೂ ಆಕೆಯನ್ನು ಗುರುತಿಸಿರಲಿಲ್ಲ.

ಜನರ ನಡುವೆ ಸಾಮಾನ್ಯರಂತೆ ದೇವಸ್ಥಾನ ಸುತ್ತಿದ್ದ ಅನುಷ್ಕಾರನ್ನು ಜನ ಎಲ್ಲಿಯೂ ಗುರುತು ಹಿಡಿದಿರಲಿಲ್ಲ. ಕೊರೊನಾದಂತಹ ಸಂದರ್ಭದಲ್ಲಿ ಸಾಮಾಜಿಕ ಅಂತರಕೊಳ್ಳುವುದು ಅತೀ ಅಗತ್ಯ. ಇಂತಹ ಸಮಯದಲ್ಲಿ ಜನಸಂದಣಿಯಾಗಬಾರದು ಎಂಬ ಕಾರಣಕ್ಕೆ ಅನುಷ್ಕಾ ಎಲ್ಲಿಯೂ ಜನ ತಮ್ಮ ಗುರುತು ಹಿಡಿಯಬಾರದು ಎಂಬ ರೀತಿ ವರ್ತಿಸಿದ್ದರು.

ಸ್ಥಳೀಯರು ದೇವಾಲಯದಲ್ಲಿ ಆಕೆಯನ್ನು ಗುರುತಿಸದ ಕಾರಣ ಆಕೆ ಖುಷಿಯಿಂದ ದೇವರ ದರ್ಶನ ಮಾಡಿದ್ದರು. ಈಗ ಆಕೆ ಬೋಟ್‌ನಲ್ಲಿ ಪ್ರಯಾಣ ಮಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು