ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಜಿವಿಯ ಥ್ರಿಲ್ಲರ್‌ಗೆ ಅಪ್ಸರೆ ಎಂಟ್ರಿ

Last Updated 7 ಜುಲೈ 2020, 8:20 IST
ಅಕ್ಷರ ಗಾತ್ರ

ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಸಿನಿ ರಸಿಕರು ಈಗ ‘ಥ್ರಿಲ್‌’ ಆಗುವಂತಹಮತ್ತೊಂದು ಸುದ್ದಿ ನೀಡಿದ್ದಾರೆ. ಕೊರೊನಾ ಕಾಲದಲ್ಲಿಅವರಿಗೆ ಓಟಿಟಿಯಲ್ಲಿ ‘ಕ್ಲೈಮ್ಯಾಕ್ಸ್‌’ ಮತ್ತು ‘ನೇಕೆಡ್‌’ ಚಿತ್ರಗಳು ಸಿಕ್ಕಾಪಟ್ಟೆಯಶಸ್ಸು ತಂದುಕೊಟ್ಟಿವೆಯಂತೆ. ಇದೇ ಜೋಷ್‌ನಲ್ಲಿ ಓಟಿಟಿಗೆ ತಮ್ಮ ಮೂರನೇ ಚಿತ್ರ ಘೋಷಣೆ ಮಾಡಿದ್ದಾರೆ.

ಅವರ ಹೊಸ ಚಿತ್ರದ ಹೆಸರು ‘ಥ್ರಿಲ್ಲರ್‌’. ಈ ಚಿತ್ರಕ್ಕೆ ಅಪ್ಸರೆಯಂತಹ ನಾಯಕಿಯನ್ನೂ ಅವರು ಪರಿಚಯಿಸುತ್ತಿದ್ದಾರೆ. ನಾಯಕಿಯ ಹೆಸರು ಕೂಡ ಅಪ್ಸರಾ ರಾಣಿ! ನೋಡಲು ಅಪ್ಸರೆಯಂತೆ ಇದ್ದಾರೆ. ಈ ನಟಿ ಈಗ ‘ಆರ್‌ಜಿವಿ ವರ್ಲ್ಡ್‌ ಥಿಯೇಟರ್‌’ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ‘ಒಳ್ಳೆಯ ಡಾನ್ಸರ್‌ ಮತ್ತು ಅಭಿನೇತ್ರಿಯೂ ಹೌದು’ ಎನ್ನುವಪ್ರಶಂಸೆಯ ಮಾತು ಹೇಳಿದ್ದಾರೆಆರ್‌ಜಿವಿ.

ಅಪ್ಸರಾ ರಾಣಿ ಮೂಲತಃ ಒಡಿಶಾದವರು. ಬೆಳೆದಿದ್ದರು ಡೆಹರಾಡೂನ್‌ನಲ್ಲಿ. ಸದ್ಯ ನೆಲೆಸಿರುವುದು ಹೈದರಾಬಾದ್‌ನಲ್ಲಿ. ಮಾದಕ ನಯನ ಮತ್ತು ಮೈಮಾಟದ ಈ ಚೆಲುವೆಯನ್ನು ತಮ್ಮ ಬ್ಯಾನರ್‌ನಡಿ ‘ಥ್ರಿಲ್ಲರ್‌’ ಚಿತ್ರದ ಮೂಲಕ ಸಿನಿರಸಿಕರಿಗೆ ಪರಿಚಯಿಸಲು ಆರ್‌ಜಿವಿ ತುಂಬಾ ಉತ್ಸುಕರಾಗಿದ್ದಾರೆ.

ಅಪ್ಸರಾ ರಾಣಿಯ ಮಾದಕ ಭಂಗಿಯ ಫೋಟೊಗಳನ್ನು ಮತ್ತು ಅಪ್ಸರಾ ಜತೆಗೆ ಬಿರಿಯಾನಿ ಮೆಲ್ಲುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರಿಂದ ಸಿಗುತ್ತಿರುವ ಪ್ರತಿಕ್ರಿಯೆಗೆಆರ್‌ಜಿವಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಈ ಚಿತ್ರ ಪ್ರೇಕ್ಷಕರಿಗೆ ಯಾವಾಗ ವೀಕ್ಷಣೆಗೆ ಲಭ್ಯವಾಗಬಹುದು ಎನ್ನುವ ಮಾಹಿತಿಯನ್ನು ವರ್ಮಾ ಇನ್ನೂ ತಿಳಿಸಿಲ್ಲ.

ಕೊರೊನಾ ಲಾಕ್‌ಡೌನ್‌ ವಿರಾಮದಲ್ಲಿ ಒಟಿಟಿಯಲ್ಲಿ ವೀಕ್ಷಿಸುವವರಿಗಾಗಿ ನಿರ್ಮಿಸಿದ ‘ಕ್ಲೈಮ್ಯಾಕ್ಸ್’ ಚಿತ್ರ ಬಿಡುಗಡೆಯಾದ ಒಂದು ದಿನದೊಳಗೆ1.68 ಲಕ್ಷ ಜನರು ತಲಾ ₹100 ಪಾವತಿಸುವ ಮೂಲಕ ವೀಕ್ಷಣೆ ಮಾಡಿದರು. ಹಾಗೆಯೇ‘ನೇಕೆಡ್‌’ ಕೂಡ ಅದ್ಭುತ ಯಶಸ್ಸು ನೀಡಿದೆ. ಇನ್ನು ‘ಥ್ರಿಲ್ಲರ್‌’ ಹ್ಯಾಟ್ರಿಕ್‌ ಸಕ್ಸಸ್‌ ತಂದುಕೊಡಲಿದೆ ಎನ್ನುವುದು ವರ್ಮಾ ಲೆಕ್ಕಾಚಾರ.

ವರ್ಮಾಸದ್ಯ ಸಮರಕಲೆಯ ಕೇಂದ್ರಿತ ‘ಎಂಟರ್ ದಿ ಗರ್ಲ್ ಡ್ರ್ಯಾಗನ್’ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ಪೂಜಾ ಬಾಲೇಕರ್ ಮುಖ್ಯ ಪಾತ್ರ ನಿಭಾಯಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಕೆಲವು ದೃಶ್ಯಗಳನ್ನು ಚೀನಾದಲ್ಲಿ ಚಿತ್ರಿಕರಿಸಲು ವರ್ಮಾ ತೀರ್ಮಾನಿಸಿದ್ದರು. ಆದರೆ ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ಚೀನಾ ಪ್ರವಾಸ ರದ್ದು ಮಾಡಿ, ಭಾರತದಲ್ಲೇ ಚಿತ್ರೀಕರಿಸುವ ನಿರ್ಧಾರ ತೆಗೆದುಕೊಂಡಿರುವ ಸುದ್ದಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT